ನವದೆಹಲಿ: ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ನ ಪ್ರಕೋಪಕ್ಕೆ ಕಡಿವಾಣ ಹಾಕಲು ಭಾರತ ಸರ್ಕಾರ 21 ದಿನಗಳ ಲಾಕ್ ಡೌನ್ ಘೋಷಿಸುವ ನಿರ್ಣಯ ಕೈಗೊಂಡಿತ್ತು. ಇದಾದ ಬಳಿಕ ತಮ್ಮ ತಮ್ಮ ಮನೆಗೆ ಮರಳಲು ಹಲವರು ಪಾದಯಾತ್ರೆ ನಡೆಸಲಾರಂಭಿದರೆ. ಇನ್ನುಳಿದ ಕೆಲವರು ರೇಲ್ವೆ ಸೇವೆ ಆರಂಭವಾದ ಬಳಿಕ ತಮ್ಮ ಮನೆಗೆ ತೆರಳಲು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ ರೇಲ್ವೆ ವಿಭಾಗ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. IRCTC ನಲ್ಲಿ ಇದೀಗ ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಬಳಿಕ ಎಲ್ಲ ರೈಲುಗಳ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು. ಇದಾದ ಬಳಿಕ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯನ್ನೂ ಕೂಡ ನಿಲ್ಲಿಸಲಾಗಿತ್ತು.


COMMERCIAL BREAK
SCROLL TO CONTINUE READING

ಏಪ್ರಿಲ್ 15 ರಿಂದ ಕಾಯ್ದಿರಿಸಲಾಗುತ್ತಿರುವ ಮುಂಗಡ ಟಿಕೆಟ್ ಗೆ ಭಾರತೀಯ ರೈಲು ಸ್ವೀಕರಿಸಲು ಆರಂಭಿಸಿದೆ. ಏಕೆಂದರೆ, ಏಪ್ರಿಲ್ 14 ರವರೆಗೆ ದೇಶಾದ್ಯಂತ ಲಾಕ್ ಡೌನ್ ಚಾಲ್ತಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಎಲ್ಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಸದ್ಯ ರೈಲು ಸೇವೆ ನಿಧಾನಕ್ಕೆ ಹಳಿಗಳ ಮೇಲೆ ಮರಳಲಾರಂಭಿಸಿದೆ. ಇದರಿಂದ ಜನರ ಉತ್ಸಾಹ ಮರಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಮಾರ್ಚ್ 22 ರಂದು ಘೋಷಿಸಲಾಗಿದ್ದ ಜನತಾ ಕರ್ಫ್ಯೂ ದಿನ ಭಾರತೀಯ ರೈಲು ತನ್ನ ಎಲ್ಲ ಪ್ರವಾಸಿ ರೈಲುಗಳ ಪ್ರವಾಸವನ್ನು ರದ್ದುಗೊಳಿಸಿದ್ದು ಇಲ್ಲಿ ಗಮನಾರ್ಹ. ಬಳಿಕ ಈ ಸೇವೆಯನ್ನು ಮೊದಲು ಮಾರ್ಚ್ 31ರ ವರೆಗೆ ಬಂದ್ ಮಾಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ವತಿಯಿಂದ ಲಾಕ್ ಡೌನ್ ಅವಧಿ ವಿಸ್ತರಣೆಯಾದ ಬೆನ್ನಲ್ಲೇ, ರೇಲ್ವೆ ಸೇವೆಯನ್ನು ಏಪ್ರಿಲ್ 14ರವರೆಗೆ ಬಂದ್ ಮಾಡಲಾಗಿದೆ.


ಆದರೆ, ಈ ಕಾಲಾವಧಿಯಲ್ಲಿ ಸರಕು ಸಾಗಾಣಿಕೆ ನಡೆಸುವ ಸುಮಾರು 9000 ರೈಲುಗಳು ಎಂದಿನಂತೆ ತನ್ನ ಕಾರ್ಯವನ್ನು ಮುಂದುವರೆಸಲಿವೆ ಎಂದು ಸರ್ಕಾರ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರೇಲ್ವೆ ವಿಭಾಗದ ವರಿಷ್ಠ ಅಧಿಕಾರಿಯೊಬ್ಬರು, IRCTC ಏಪ್ರಿಲ್ 15 ರಿಂದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಸ್ವೀಕರಿಸಲು ಆರಂಭಿಸಿದೆ, ಏಕೆಂದರೆ ಸರ್ಕಾರ ಏಪ್ರಿಲ್ 14 ರವರೆಗೆ ಸರ್ಕಾರದಿಂದ ಲಾಕ್ ಡೌನ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಿಧಾನವಾಗಿ ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಅಗತ್ಯತೆ ಇದ್ದು, ರೈಲುಗಳು ಕೂಡ ನಿಧಾನಕ್ಕೆ ಹಳಿಗಳಿಗೆ ಮರಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.