ನವದೆಹಲಿ: ಮುಂದಿನ ಎರಡು ಭಾರತೀಯ ರೈಲ್ವೆಯಲ್ಲಿ 2021ರ ಹೊತ್ತಿಗೆ 4 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ರೈಲ್ವೆ ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ. ರೈಲ್ವೇ ಇಲಾಖೆ ಮೇಲ್ವರ್ಗದ ಬಡವರಿಗೆ 10% ಮೀಸಲಾತಿ ಸೌಲಭ್ಯ ಒದಗಿಸುವ ಮೊದಲ ಸರ್ಕಾರಿ ಇಲಾಖೆಯಾಗಲು ಸಿದ್ಧವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 23 ಸಾವಿರ ಉದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಮುಂದಿನ ಆರು ತಿಂಗಳಲ್ಲಿ ರೈಲ್ವೇಸ್ ಸುಮಾರು 1.31 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿ ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಲಿದೆ ಎಂದು ಗೋಯಲ್ ತಿಳಿಸಿದ್ದಾರೆ. ಭಾರತೀಯ ರೈಲ್ವೇ ಇಲಾಖೆ 15,06,598 ನೌಕರರ ಸಾಮರ್ಥ್ಯ‌ಬಲ ಹೊಂದಿದೆ. ಇವುಗಳಲ್ಲಿ 12,23,622 ನೌಕರರು ಪ್ರಸ್ತುತ ಉದ್ಯೋಗದಲ್ಲಿದ್ದಾರೆ. ಉಳಿದ 2,82,976 ಹುದ್ದೆ ಖಾಲಿಯಾಗಿದೆ. ರೈಲ್ವೇಯಲ್ಲಿ 1,51,548 ಹುದ್ದೆಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ 1,31,428 ಹುದ್ದೆಗಳು ಖಾಲಿಯಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 


ರೈಲ್ವೇ ಇಲಾಖೆಯಲ್ಲಿ 2019ರಲ್ಲಿ ಸುಮಾರು  53,000 ಮಂದಿ, 2020-2021 ರಲ್ಲಿ 46,000 ಮಂದಿ ನಿವೃತ್ತರಾಗಲಿದ್ದಾರೆ. ಇದರಿಂದಾಗಿ ಸುಮಾರು ಒಂದು ಲಕ್ಷ ಜನರಿಗೆ ಉದ್ಯೋಗ ಲಭಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ರೈಲ್ವೇ ಯೋಜನೆ ನಾಲ್ಕು ಲಕ್ಷ ಜನರಿಗೆ ಉದ್ಯೋಗ ಒದಗಿಸುವುದು. ಇನ್ಮುಂದೆ ನಡೆಯುವ ಎಲ್ಲ ನೇಮಕಾತಿ ಪ್ರಕ್ರಿಯೆಗಳಲ್ಲೂ ಶೇಕಡ 10ರ ಮೀಸಲು ಕೋಟಾ ಅನ್ವಯವಾಗಲಿದೆ ಎಂದು ವಿವರಿಸಿದರು. 


ಹೊಸ ಪರಿಷ್ಕರಣೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10 ಪ್ರತಿಶತದಷ್ಟು ಮೀಸಲಾತಿ ನೀಡಲು ರೈಲ್ವೆ ಸರ್ಕಾರದ ಮೊದಲ ಇಲಾಖೆಯಾಗುತ್ತದೆ, ಅದರಲ್ಲಿ ಮುಂದಿನ ಎರಡು ವರ್ಷಗಳಲ್ಲಿ 23 ಸಾವಿರ ಉದ್ಯೋಗಗಳನ್ನು ಕಾಯ್ದಿರಿಸಲಾಗುವುದು. ಆದಾಗ್ಯೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು ಮತ್ತು ಇತರರು ಈ ರೀತಿಯ ಮೀಸಲಾತಿಗೆ ಇದು ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದರು.