ನವದೆಹಲಿ: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಜನವರಿ 11ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ(India Meteorological Department) ನೀಡಿದೆ. ಮಳೆಯ ಜೊತೆಗೆ ದಟ್ಟವಾದ ಮಂಜು ಕೂಡ ಜನರಿಗೆ ಸಂಕಷ್ಟವನ್ನು ಹೆಚ್ಚಿಸಲಿದೆ ಅಂತಾ ಎಚ್ಚರಿಕೆ ನೀಡಲಾಗಿದೆ.  


COMMERCIAL BREAK
SCROLL TO CONTINUE READING

ಈ ರಾಜ್ಯಗಳಲ್ಲಿ ವರುಣನ ಆರ್ಭಟ!


ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಉತ್ತರ ಮತ್ತು ಮಧ್ಯ ಭಾರತದಲ್ಲಿ ಮಳೆಯ ಅಬ್ಬರ(Heavy Rainfall) ಮುಂದುವರಿಯಲಿದೆ. ಇಂದು (ಭಾನುವಾರ) ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಮಳೆಯಾಗಲಿದೆ. ಆದರೆ ಇದಾದ ಬಳಿಕ ಮಳೆಯ ಪ್ರಭಾವ ಕಡಿಮೆಯಾಗಲಿದೆ. ಮತ್ತೊಂದೆಡೆ ಜನವರಿ 11ರವರೆಗೆ ಮಧ್ಯಪ್ರದೇಶ, ವಿದರ್ಭ, ಪೂರ್ವ ಭಾರತ ಮತ್ತು ಛತ್ತೀಸ್‌ಗಢದಲ್ಲಿ ಮಳೆ ಮುಂದುವರಿಯುತ್ತದೆ ಅಂತಾ ಹೇಳಲಾಗಿದೆ.


ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲು ಆಗ್ರಹಿಸಿದ ಕಾಂಗ್ರೆಸ್


ದಟ್ಟ ಮಂಜಿನ ಬಗ್ಗೆ ಎಚ್ಚರಿಕೆ


ಮಳೆಯ ಜೊತೆಗೆ ದಟ್ಟವಾದ ಮಂಜು(Dense Fog) ಕೂಡ ಜನರು ಎದುರಿಸಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಉತ್ತರ ಪ್ರದೇಶ, ಬಿಹಾರ, ವಾಯುವ್ಯ ಬಂಗಾಳ ಮತ್ತು ಸಿಕ್ಕಿಂನಲ್ಲಿ ಮುಂದಿನ 24 ಗಂಟೆಗಳ ಕಾಲ ದಟ್ಟ ಮಂಜು ಇರಲಿದೆ.


ದೆಹಲಿಯಲ್ಲಿ ಮಳೆಯ ದಾಖಲೆ  


ಈ ಬಾರಿ ಜನವರಿಯಲ್ಲಿ ದೆಹಲಿಯಲ್ಲಿ ಸುರಿದ ಮಳೆ(Rainfall) 22 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 41 ಮಿ.ಮೀ ಮಳೆಯಾಗಿದೆ. ಶುಕ್ರವಾರ ರಾತ್ರಿಯಿಂದ ದೆಹಲಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ದೆಹಲಿಯ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.


ಇದನ್ನೂ ಓದಿ: ನರ್ಸ್ ಆಗುವ ಮೂಲಕ ಆಸ್ಪತ್ರೆಯಿಂದ ಮಗು ಕದ್ದ ಮಹಿಳೆ: ಕಾರಣ ತಿಳಿದು ಬೆಚ್ಚಿಬಿದ್ದ ಪೊಲೀಸರು..!


IMD ಪ್ರಕಾರ ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಸೈಕ್ಲೋನ್‌ಗಳಿಂದ ಮಳೆಯಾಗುತ್ತಿದೆ. ಮಳೆಯಿಂದಾಗಿ ಟ್ರೋಪೋಸ್ಪಿಯರ್ ಮಟ್ಟದಲ್ಲಿ ತೇವಾಂಶ ಬಂದಿದೆ ಅಂತಾ ಹೇಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.