RAJASTHAN BUS ACCIDENT:ಬೂಂದಿಯಲ್ಲಿ ನದಿಗೆ ಉರುಳಿದ ಬಸ್, 24 ಮಂದಿ ಮೃತ
ಘಟನಾ ಸ್ಥಳಕ್ಕೆ ತಲುಪಿರುವ ಸ್ಥಳೀಯ ಜನರು ಹಾಗೂ ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ನದಿಯ ಎರಡೂ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ.
ಬೂಂದಿ: ಬೂಂದಿ ಜಿಲ್ಲೆಯ ಲಾಖೇರಿ ಬಳಿಯಿಂದ ಭಾರಿ ದುರ್ಘಟನೆಯೊಂದು ವರದಿಯಾಗಿದೆ. ಇಲ್ಲಿನ ಮೇಜ್ ನದಿಯಲ್ಲಿ ಪ್ರವಾಸಿಗರ ಬಸ್ಸೊಂದು ನದಿಗೆ ಉರುಳಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ 24 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರವಾಸಿಗರಿಂದ ತುಂಬಿದ್ದ ಈ ಬಸ್ ಕೋಟಾನಿಂದ ಸವಾಯಿ ಮಾಧೋಪುರ್ ಗೆ ತೆರಳುತ್ತಿತ್ತು ಎನ್ನಲಾಗಿದೆ. ಬಸ್ಸಿನ ಟೈರ್ ಸ್ಫೋಟಿಸಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಸದ್ಯ ಘಟನಾ ಸ್ಥಳದಲ್ಲಿ ಭಾರಿ ಆತಂಕ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಮಾಹಿತಿಗಳ ಪ್ರಕಾರ ಬೂಂದಿ ಬಳಿ ಇರುವ ಲಾಖೇರಿ ಖಾಸಗಿ ಬಸ್ ವೊಂದು ಮೇಜ್ ನದಿಯಲ್ಲಿ ಉರುಳಿದೆ. ಬಸ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿರುವ ಸ್ಥಳೀಯರು ಹಾಗೂ ಇತರೆ ಆಡಳಿತದ ಜನರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ನದಿಯ ಎರಡೂ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಕಲೆಕ್ಟರ್ ಅಂತರ್ ಸಿಂಗ್ ಹಾಗೂ SP ಶಿವರಾಜ್ ಸಿಂಗ್ ರವಾನೆಯಾಗಿದ್ದಾರೆ. ಇದುವರೆಗೆ ಲಭಿಸಿರುವ ಮಾಹಿತಿ ಪ್ರಕಾರ ಈ ಘಟನೆಯಲ್ಲಿ ಸುಮಾರು 24 ಜನ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಇನ್ನೂ ಹಲವರು ಬಸ್ ನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯನ್ನು ವರ್ತಿಸಲಾಗಿದೆ.
ಘಟನೆಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸಂತಾಪ ಸೂಚಿಸಿದ್ದಾರೆ. ಘಟನೆಯ ಕುರಿತಂತೆ ಟ್ವೀಟ್ ಮಾಡಿರುವ ಅವರು, ತಮ್ಮ ಸಂಸದೀಯ ಕ್ಷೇತ್ರ ಬೂಂದಿಯ ಲಾಖೇರಿ ಕ್ಷೇತ್ರದಲ್ಲಿ ಬಸ್ಸೊಂದು ನದಿಗೆ ಉರುಳಿ ಬಿದ್ದ ಪರಿಣಾಮ 35ಜನ ಪ್ರಾಣ ಕಳೆದುಕೊಂಡಿರುವ ಘಟನೆ ತಮಗೆ ಅಪಾರ ನೋವುತಂದಿದ್ದು, ಮನಸ್ಸು ವಿಚಲಿತಗೊಂಡಿದೆ ಎಂದು ಹೇಳಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಜೊತೆಗೆ ತಾವು ಚರ್ಚೆ ನಡೆಸಿರುವುದಾಗಿ ಹೇಳಿರುವ ಅವರು ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡಲು ಸೂಚಿಸಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಘಟನೆಯಲ್ಲಿ ಮೃತಪಟ್ಟ ಆತ್ಮಗಳಿಗೆ ದೇವರು ತಮ್ಮ ಚರಣದಲ್ಲಿ ಸ್ಥಾನ ಕಲ್ಪಿಸಲಿ ಎಂದು ಪ್ರಾರ್ಥಿಸಿದ್ದಾರೆ.