ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷವು ದೇಶವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡಲು ಪ್ರಯತ್ನಿಸಿದರೆ ಭಾರತವೂ ಕೂಡ ಪಾಕಿಸ್ತಾನದ ಸ್ಥಿತಿಯನ್ನೇ ಎದುರಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್  ಎಚ್ಚರಿಸಿದ್ದಾರೆ.ಬಿಜೆಪಿಯು ಕೇವಲ ಧರ್ಮದ ವಿಷಯದ ಮೇಲೆ ಚುನಾವಣೆಗಳನ್ನು ಹೋರಾಡಿ ಗೆಲ್ಲುತ್ತದೆ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಸಿದ್ಧತೆಯನ್ನು ಪರಿಶೀಲಿಸಲು ಪಕ್ಷದ ನಾಯಕರೊಂದಿಗೆ ಸಭೆ ನಡೆಸಲು ಗೆಹ್ಲೋಟ್ ಬುಧವಾರದಿಂದ ಬಿಜೆಪಿ ಆಡಳಿತವಿರುವ ಗುಜರಾತ್‌ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ.


ಇದನ್ನೂ ಓದಿ: ಎರಡನೇ ಹಂತದ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್


ತಮ್ಮ ಭೇಟಿಯ ಕೊನೆಯ ದಿನ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ''ದೇಶಾದ್ಯಂತ ಬಿಜೆಪಿಯಿಂದ ಕಾರ್ಯಕರ್ತರು, ಪತ್ರಕರ್ತರಂತಹ ಅನೇಕರನ್ನು ಜೈಲಿಗಟ್ಟಲಾಗಿದೆ. ಅವರು ಫ್ಯಾಸಿಸ್ಟ್‌ಗಳು, ಕೇವಲ ಧರ್ಮದ ವಿಚಾರದಲ್ಲಿ ಚುನಾವಣೆ ಗೆಲ್ಲುತ್ತಿದ್ದಾರೆ. ಇಲ್ಲದಿದ್ದರೆ, ಬಿಜೆಪಿ ಯಾವುದೇ ಸಿದ್ಧಾಂತ, ನೀತಿ ಅಥವಾ ಆಡಳಿತ ಮಾದರಿಯನ್ನು ಹೊಂದಿಲ್ಲ. ಬಿಜೆಪಿಯು ದೇಶವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡಲು ಪ್ರಯತ್ನಿಸಿದರೆ ಪಾಕಿಸ್ತಾನದ ಸ್ಥಿತಿಯನ್ನೇ ಭಾರತ ಎದುರಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.


"ಧರ್ಮವನ್ನು ಆಧರಿಸಿದ ರಾಜಕೀಯವು ಎಲ್ಲಕ್ಕಿಂತ ಸುಲಭವಾಗಿದೆ ಮತ್ತು ಅಡಾಲ್ಫ್ ಹಿಟ್ಲರ್ ಕೂಡ ಅದರಲ್ಲಿ ತೊಡಗಿಸಿಕೊಂಡಿದ್ದರು.ಈಗ ಬಿಜೆಪಿ ಗುಜರಾತ್ ಮಾದರಿ ಹೆಸರಿನಲ್ಲಿ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.


ಇದನ್ನೂ ಓದಿ: ಮೈಸೂರು ದಸರಾ 2022 : ಗಜಪಡೆಯ ಸಾರಥಿ ಅಭಿಮನ್ಯುವಿಗೆ ಇಂದಿನಿಂದ ತಾಲೀಮು ಶುರು 


2017 ರಲ್ಲಿ ಗುಜರಾತ್ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿದ್ದ ಗೆಹ್ಲೋಟ್, "ನಾವು 2017 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಹಳ ಹತ್ತಿರದಲ್ಲಿದ್ದೆವು. ಆದರೆ ದುರದೃಷ್ಟವಶಾತ್, ಪ್ರಚಾರದ ಸಮಯದಲ್ಲಿ ಪಿಎಂ ಮೋದಿ ಬಾಲಿವುಡ್ ನಟನಂತೆ ವರ್ತಿಸಿ ಅವರು ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕ ಮಣಿಶಕರ್ ಅಯ್ಯರ್ ಅವರ ಹೇಳಿಕೆಯನ್ನು ತಿರುಚಿ ಸಹಾನುಭೂತಿ ಗಳಿಸಿದರು, ಇದರಿಂದಾಗಿ ನಾವು ಸೋಲನ್ನಪ್ಪಬೇಕಾಯಿತು ಎಂದು ಗೆಹಲೋಟ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.