ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದ 13 ಮರುಭೂಮಿ ಜಿಲ್ಲೆಗಳ ನಿವಾಸಿಗಳಿಗೆ 70 ಲೀಟರ್ ನೀರನ್ನು ಉಚಿತವಾಗಿ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.


COMMERCIAL BREAK
SCROLL TO CONTINUE READING

ರಾಜಸ್ಥಾನ ಸರ್ಕಾರದ ಹೇಳಿಕೆಯ ಪ್ರಕಾರ, ರಾಜ್ಯದ ಜನರಿಗೆ ಪರಿಹಾರ ನೀಡಲು ನೀರಿನ ದರವನ್ನು ತಿದ್ದುಪಡಿ ಮಾಡುವ ಹಣಕಾಸು ಇಲಾಖೆಯ ಪ್ರಸ್ತಾಪಕ್ಕೆ  ಮುಖ್ಯಮಂತ್ರಿ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ.


ರಾಜ್ಯದ ಗ್ರಾಮೀಣ ಪ್ರದೇಶದ ಎಲ್ಲ ವ್ಯಕ್ತಿಗಳಿಗೆ 40 ಲೀಟರ್ ಉಚಿತ ನೀರನ್ನು ಒದಗಿಸಲು ರಾಜ್ಯ ಸರ್ಕಾರ ಈ ಹಿಂದೆ ಅನುಮೋದನೆ ನೀಡಿತ್ತು, ಆದರೆ ಮರುಭೂಮಿ ಪ್ರದೇಶಗಳಲ್ಲಿ ಜಾನುವಾರುಗಳನ್ನು ಹೊಂದಿರುವ ನಿವಾಸಿಗಳಿಗೆ ಹೆಚ್ಚುವರಿ 30 ಲೀಟರ್ ಅಗತ್ಯವನ್ನು ಪರಿಗಣಿಸಿ ಹೊಸ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಕಳೆದ ತಿಂಗಳ ಆರಂಭದಲ್ಲಿ, ರಾಜಸ್ಥಾನದ ಪಾಲಿಯಲ್ಲಿ ತೀವ್ರ ನೀರಿನ ಕೊರತೆಯನ್ನು ಪರಿಹರಿಸಲು, ಬರಪೀಡಿತ ಜಿಲ್ಲೆಗೆ ನೀರನ್ನು ಸಾಗಿಸುವ ರೈಲನ್ನು ಜೋಧಪುರ ರೈಲ್ವೆ ನಿಲ್ದಾಣದಿಂದ ಕಳುಹಿಸಲಾಗಿತ್ತು.