ಜೈಪುರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರು ಇಬ್ಬರು ಟ್ರಕ್ ಚಾಲಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದನ್ನು ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಶುಕ್ರವಾರ ಖಂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹತ್ಯೆಯಾದವರಲ್ಲಿ ಓರ್ವ ಅಲ್ವಾರ್ ಜಿಲ್ಲೆಯ ಟ್ರಕ್ ಚಾಲಕನಾಗಿದ್ದು, ಶೋಪಿಯಾನ್‌ನಲ್ಲಿ ಸೈನ್ಯಕ್ಕಾಗಿ ಹಾಲು ಸರಬರಾಜು ಮಾಡುತ್ತಿದ್ದ ಎಂದು ಪೈಲಟ್ ಹೇಳಿದ್ದಾರೆ.


"ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಸೈನ್ಯಕ್ಕಾಗಿ ಹಾಲು ಸಾಗಿಸುತ್ತಿದ್ದ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಟ್ರಕ್ ಚಾಲಕ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದನ್ನು ತೀವ್ರ ದುಃಖಕರ ಸಂಗತಿ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರ ಕಾಶ್ಮೀರದ ಜನರಿಗೆ ಸುರಕ್ಷತೆ ಒದಗಿಸಬೇಕು" ಎಂದು ಪೈಲೆಟ್ ಟ್ವೀಟ್ ಮಾಡಿದ್ದಾರೆ.


ಶೋಪಿಯಾನ್‌ನ ಚಿತ್ರಗಂ ಬಳಿ ಭಯೋತ್ಪಾದಕರು ಎರಡು ಟ್ರಕ್‌ಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿತ್ತು. ಏತನ್ಮಧ್ಯೆ, ಟ್ರಕ್ ಚಾಲಕರು ಭಯೋತ್ಪಾದಕ ದಾಳಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದು, ಅವರಿಗೆ ಸುರಕ್ಷತೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.