ಗುಜ್ಜರ್ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಘೋಷಿಸಿದ ರಾಜಸ್ತಾನ ಸರ್ಕಾರ
ರಾಜಸ್ತಾನ ಸರ್ಕಾರ ಈಗ ಗುಜ್ಜರ್ ಸೇರಿ ಇತರ ನಾಲ್ಕು ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿಯನ್ನು ಘೋಷಿಸಿದೆ.
ನವದೆಹಲಿ: ರಾಜಸ್ತಾನ ಸರ್ಕಾರ ಈಗ ಗುಜ್ಜರ್ ಸೇರಿ ಇತರ ನಾಲ್ಕು ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿಯನ್ನು ಘೋಷಿಸಿದೆ.
ಬುಧುವಾರದಂದು ರಾಜ್ಯಸರ್ಕಾರ ಶೇ.5 ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಸೂದೆಯನ್ನು ಮಂಡಿಸಿದೆ.ರಾಜಸ್ಥಾನ ಹಿಂದುಳಿದ ವರ್ಗಗಳು (ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ನೇಮಕಾತಿ ಮತ್ತು ಸೇವೆಗಳಲ್ಲಿ ಮೀಸಲಾತಿ) ತಿದ್ದುಪಡಿ ಮಸೂದೆ 2019 ಅನ್ವಯ ಗುಜ್ಜರು ಮತ್ತು ಇತರ ಹಿಂದುಳಿದ ವರ್ಗಗಳಾದ ಬಂಜಾರ, ಗಡಿಯಾ, ಲೋಹಾರ್,ರೈಕಾ, ಜಾತಿಗಳಿಗೂ ಸಹ ಶೇ.5ರಷ್ಟು ಮೀಸಲಾತಿ ನಿಯಮ ಅನ್ವಯವಾಗಲಿದೆ.
ರಾಜಸ್ತಾನದಲ್ಲಿ ಗುಜ್ಜರು ಮೀಸಲಾತಿಗಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಹಿನ್ನಲೆಯಲ್ಲಿ ಅದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈಗ ರಾಜ್ಯ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.ಆ ಮೂಲಕ ಈಗ ರಾಜಸ್ತಾನದಲ್ಲಿ ಹಿಂದುಳಿದ ವರ್ಗದ ಮೀಸಲಾತಿ ಪ್ರಮಾಣವು ಶೇ.21 ರಿಂದ 26ಕ್ಕೆ ಹೆಚ್ಚಳವಾಗಲಿದೆ.