ಜೈಪುರ: ಒಂದು ಕಡೆ ಮೂವರು ಯುವಕರು ರಸ್ತೆ ಅಪಘಾತ ಸಾಯುತ್ತಿದ್ದರೆ ಇನ್ನೊಂದೆಡೆಗೆ ರಾಜಸ್ತಾನದ  ಯುವಕನೊಬ್ಬ ಅವರಿಗೆ ಸಹಾಯ ಮಾಡುವ ಬದಲಾಗಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಆ ಮೂಲಕ  ಅಮಾನವೀಯವಾಗಿ ವರ್ತಿಸಿದ್ದಾನೆ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.



COMMERCIAL BREAK
SCROLL TO CONTINUE READING

ಇಲ್ಲಿನ ಪೋಲೀಸರು ಹೇಳುವಂತೆ ಅಪಘಾತ ನಡೆದಾಗ ಅಲ್ಲಿ ನೆರೆದಿದ್ದವರು ಸಹಾಯ ಮಾಡಿದ್ದರೆ ಅವರನ್ನು  ಉಳಿಸಿಕೊಳ್ಳಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಸಮಾಜಶಾಸ್ತ್ರಜ್ಞರು ಹೇಳವಂತೆ ಸೇಲ್ಪಿ ಎನ್ನುವುದು ಒಂದು ಮಾನಸಿಕ ಸ್ಥಿತಿ ಇದು ಹಲವಾರು ಅಪಘಾತಗಳಿಗೂ ಸಹ ಎಡೆ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆಯಲ್ಲಿ ಸೆಲ್ಫಿ ಕುರಿತಾಗಿ ಲಿಖಿತವಾಗಿ ಉತ್ತರಿಸಿರುವ ಕೇಂದ್ರ ಸಚಿವ ಹಂಸರಾಜ್ ಅಹಿರ್ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ಮುಕ್ತ ವಲಯ ಎಂದು ಘೋಷಿಸಲು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದರು.