ನವದೆಹಲಿ: ರಾಜಸ್ಥಾನದ ಸಿರೊಹಿ ನಗರದಲ್ಲಿ 'ಪಕೋಡ'ವನ್ನು ಸೇವಿಸಿದ ನಂತರ ಆಹಾರ ವಿಷದಿಂದಾಗಿ  ಮಕ್ಕಳು ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆಯು ಶುಕ್ರವಾರ ನಡೆದಿದ್ದು, ಆಹಾರದ ಸೇವಿದ ತಕ್ಷಣ ಅಸ್ತವ್ಯಸ್ತಗೊಂಡವರನ್ನು ತಕ್ಷಣ ಹತ್ತಿರದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಧ್ಯ ಅವರೆಲ್ಲರೂ ಕೂಡ ಸುಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.



ಈ ಕುರಿತಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಎಂ ಎಲ್ ಹಿಂದೋಲಾ "ಇಲ್ಲಿ  ಮಕ್ಕಳನ್ನು ಒಳಗೊಂಡಂತೆ 40 ಕ್ಕಿಂತ ಹೆಚ್ಚಿನ ರೋಗಿಗಳಿದ್ದಾರೆ, ಅವರಿಗೆ ನಾವು ಸೂಕ್ತ ಔಷಧಿಗಳನ್ನು ನೀಡಿದ್ದೇವೆ ಈಗಾಗಲೇ ಅವರು ಆರೋಗ್ಯದಲ್ಲಿ  ಸಾಕಷ್ಟು ಸುಧಾರಣೆ ಕಂಡಿದ್ದಾರೆ" ಎಂದು ತಿಳಿಸಿದರು