Rajasthan Political Drama: ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಹಾಗೂ ಕಾಂಗ್ರೆಸ್ ಆಂತರಿಕ ಕಲಹದ ನಡುವೆಯೇ ಬಿಜೆಪಿ ಶಾಸಕರೊಬ್ಬರ ಮಹತ್ವದ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ. 'ನಮ್ಮ ಬಾಗಿಲು ಸಂಪೂರ್ಣವಾಗಿ ತೆರೆದಿದೆ' ಎಂದು ಬಿಜೆಪಿ ಶಾಸಕ ಕಾಳಿಚರಣ್ ಸರಾಫ್ ಹೇಳಿದ್ದಾರೆ. 'ಕಾಂಗ್ರೆಸ್ ಸರ್ಕಾರ ಬಿದ್ದು ಬಿಜೆಪಿಗೆ ಆ ಸರ್ಕಾರ ಬೀಳಿಸಲು ಯಾರಾದರೂ ಸಹಾಯ ಮಾಡಿದರೆ ಅಂತಹ ವ್ಯಕ್ತಿಗೆ ನಾವು ಸಹಕಾರ ನೀಡುತ್ತೇವೆ. ಕಾಂಗ್ರೆಸ್ ನ ಈ ನಾಟಕದಲ್ಲಿ ಬಿಜೆಪಿ ಪಾತ್ರವಿಲ್ಲ. ಇದು ಅವರ ಆಂತರಿಕ ವಿಚಾರ. ಆದರೆ ಮನೆಯಲ್ಲಿ ಕುಳಿತ ಜಾಗದಲ್ಲಿಯೇ ಲಕ್ಷ್ಮಿ ಮನೆಗೆ ಬಂದರೆ ತಿರಸ್ಕರಿಸಬಾರದು" ಎಂದು ಸಚಿನ್ ಪೈಲಟ್ ಗೆ ಸನ್ನೆಗಳ ಮೂಲಕ ಆಫರ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಮುಳುಗುತ್ತಿರುವ ಹಡಗು
ಮಾಳವೀಯನಗರದ ಬಿಜೆಪಿ ಶಾಸಕರಾಗಿರುವ ಸರಾಫ್ ಅವರು ಕಾಂಗ್ರೆಸ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಸಾಕಷ್ಟು ತಮಾಷೆಯಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಒಂದು ಮುಳುಗುತ್ತಿರುವ ಎಂದ ಅವರು, ಅದರಲ್ಲಿ ಯಾರೇ ಕುಳಿತರೂ ಭವಿಷ್ಯ ಭದ್ರಪಡಿಸಿಕೊಳ್ಳಲು ಅಲ್ಲಿ ಇಲ್ಲಿ ಓಡಾಡುತ್ತಾರೆ. ಒಂದು ತಿಂಗಳಲ್ಲಿ ಮುಳುಗುತ್ತೋ ಅಥವಾ 2 ತಿಂಗಳಲ್ಲಿ ಮುಳುಗುತ್ತೋ ಅಥವಾ 6 ತಿಂಗಳಲ್ಲಿ ಮುಳುಗುತ್ತೋ ಎಂಬುದನ್ನು ಸಾರ್ವಜನಿಕರು ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Congress President Election: ಪಕ್ಷದ ಮೂವರು ಪ್ರಮುಖ ವಕ್ತಾರರಿಂದ ರಾಜೀನಾಮೆ, ಖರ್ಗೆ ಪರ ಪ್ರಚಾರ ಮಾಡುವುದಾಗಿ ಘೋಷಣೆ


ಯಾರು ಕಾಳಿಚರಣ್ ಸರಾಫ್
ಕಾಳಿಚರಣ್ ಸರಾಫ್ ಅವರ ಬಗ್ಗೆ ಹೇಳುವುದಾದರೆ, ಅವರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ನಿಕಟವರ್ತಿ ಎಂದು ಹೇಳಲಾಗುತ್ತದೆ. ವಸುಂಧರಾ ಸರ್ಕಾರದಲ್ಲಿ ಅವರು ರಾಜ್ಯದ ಆರೋಗ್ಯ ಸಚಿವರಾಗಿದ್ದರು. ಕಳೆದ 1 ವಾರದಿಂದ ನಡೆಯುತ್ತಿರುವ ಕಾಂಗ್ರೆಸ್‌ನ ಈ ರಾಜಕೀಯ ಬಿಕ್ಕಟ್ಟಿನಲ್ಲಿ ಬಿಜೆಪಿ ಬಹಿರಂಗವಾಗಿ ಮಾತನಾಡುತ್ತಿಲ್ಲ, ಆದರೆ ಇದೀಗ ಈ ವಿಷಯದ ಬಗ್ಗೆ ಸರಾಫ್ ಅವರ ಹೇಳಿಕೆ ಬಂದಿರುವುದು ಭಾರಿ ರಾಜಕೀಯ ಮಹತ್ವ ಪಡೆದುಕೊಂಡಿದೆ.


ಇದನ್ನೂ ಓದಿ-ರಾಜಸ್ತಾನದ ಸಿಎಂ ಆಗಿ ಮುಂದುವರೆಯುವ ಸುಳಿವು ನೀಡಿದ ಅಶೋಕ್ ಗೆಹಲೋಟ್


ಸಚಿನ್ ಪೈಲಟ್ ಮೇಲೆ ಬಿಜೆಪಿ ಕಣ್ಣು 
ಸರಾಫ್ ಅವರ ಈ ಹೇಳಿಕೆಯ ಬಗ್ಗೆ ಕೆಲವು ರಾಜಕೀಯ ತಜ್ಞರು ಪ್ರತಿಕ್ರಿಯಿಸಿದ್ದಾರೆ, ಈ ಹೇಳಿಕೆಯಿಂದ ಅವರು ಸಚಿನ್ ಪೈಲಟ್ ಅನ್ನು ಗುಂಪುಗಾರಿಕೆಗೆ ಪ್ರಚೋದಿಸುವ ರೀತಿಯಲ್ಲಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಚಿನ್ ಪೈಲಟ್ ಮೇಲೆ ಬಿಜೆಪಿ ಕಣ್ಣಿದೆ ಮತ್ತು ಈ ಹಿಂದೆಯೂ ಕೂಡ ಅವರು ಸಚಿನ್ ಪೈಲಟ್ ಅವರನ್ನು ಹಲವು ಸಂದರ್ಭಗಳಲ್ಲಿ ಹೊಗಳಿದ್ದಾರೆ, ಆದರೆ, ಸಚಿನ್ ಪೈಲಟ್ ಬಿಜೆಪಿಗೆ ಎಂಟ್ರಿ ಕೊಡುವುದು ಕಷ್ಟ. ಏಕೆಂದರೆ, ವಾಸ್ತವದಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕಿ ವಸುಂಧರಾ ರಾಜೆ ಅವರು ಸಚಿನ್ ಪ್ರವೇಶವನ್ನು ಬಲವಾಗಿ ವಿರೋಧಿಸಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.