ಬಿಕನೇರ್: ರಾಜಸ್ಥಾನದ ಬಿಕನೇರ್ ಪೊಲೀಸರು ಕಳ್ಳನಿಂದ ಚಿನ್ನದ ಸರವನ್ನು ವಾಪಸ್ ಪಡೆಯಲು ಆಪರೇಶನ್ ಬಾಳೆಹಣ್ಣಿಗೆ ಮೊರೆ ಹೋಗಿದ್ದಾರೆ.ಮಂಗಳವಾರದಂದು ಗಂಗಶಹರ್ ಪ್ರದೇಶದ ಮಹಿಳೆಯೊಬ್ಬರಿಂದ ಇಬ್ಬರು ವ್ಯಕ್ತಿಗಳು ಚಿನ್ನದ ಸರವನ್ನು ಕಿತ್ತುಕೊಂಡಿದ್ದರು.


COMMERCIAL BREAK
SCROLL TO CONTINUE READING

 ಪೊಲೀಸರು ಕಳ್ಳರನ್ನು ಕೆಲವೇ ಕ್ಷಣಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪೋಲಿಸರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಅವರು ಚಿನ್ನದ ಸರವನ್ನು ನುಂಗಿದ್ದಾರೆ ಎನ್ನಲಾಗಿದೆ.


ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸರು “ನಾವು ಅವನನ್ನು ಪಿಬಿಎಂ ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಎಕ್ಸರೆಗಳು ಅವನ ಕರುಳಿನಲ್ಲಿ ಚಿನ್ನದ ಸರದ ತುಂಡುಗಳನ್ನು ತೋರಿಸಿದವು. ಅವನನ್ನು ಪೊಟ್ಯಾಸಿಯಮ್ ಭರಿತ ಆಹಾರ ಕ್ರಮದಲ್ಲಿ ಇರಿಸಿ ಮತ್ತು ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಬದಲಾಗಿ ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ತಿನಿಸಲು ವೈದ್ಯರು ನಮಗೆ ಸಲಹೆ ನೀಡಿದರು' ಎಂದು ತಿಳಿಸಿದ್ದಾರೆ.


ವೈದ್ಯರ ಸಲಹೆಯಂತೆ ಕಳ್ಳನಿಗೆ ಒಂದು ಡಜನ್‌ಗಿಂತಲೂ ಹೆಚ್ಚು ಬಾಳೆಹಣ್ಣು ಮತ್ತು ಎರಡು ಪಪ್ಪಾಯಿಗಳನ್ನು ತಿನ್ನಿಸಲಾಯಿತು. ನಂತರ ಚಿನ್ನದ ಸರವನ್ನು ವಶಪಡಿಸಿಕೊಳ್ಳಲು ಅವನ ಮಲವಿಸರ್ಜನೆಗಾಗಿ ಕಾಯ್ದರು ಎನ್ನಲಾಗಿದೆ.‘ಆಪರೇಷನ್ ಬಾಳೆಹಣ್ಣು’ ಬುಧವಾರ ಬೆಳಿಗ್ಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಪೋಲಿಸರು ಹೇಳಿದರು.


ಪೊಲೀಸರು ಸಹಚರನನ್ನು ಬಂಧಿಸಿದ್ದು ಅವರು ಇತರ ಸರ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.