Rajeev Satav : ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸದ ರಾಜೀವ್ ಸತಾವ್ ನಿಧನ..!
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.
ಮುಂಬೈ : ಕಾಂಗ್ರೆಸ್ ರಾಜ್ಯಸಭಾ ಸಂಸದ ರಾಜೀವ್ ಸತವ್ ಅವರು ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.
ಗಣ್ಯರಿಂದ ರಾಜೀವ್ ನಿಧಾನಕ್ಕೆ ಸಂತಾಪ:
ರಣದೀಪ್ ಸಿಂಗ್ ಸುರ್ಜೆವಾಲಾ(Randeep Surjewala) ತಮ್ಮ ಟ್ವೀಟ್‌ನಲ್ಲಿ 'ನಿಶಾಬ್! ಇಂದು, ಯುವ ಕಾಂಗ್ರೆಸ್‌ನಲ್ಲಿ ನನ್ನೊಂದಿಗೆ ಸಾರ್ವಜನಿಕ ಜೀವನದ ಮೊದಲ ಹೆಜ್ಜೆ ಇಟ್ಟ ಒಬ್ಬ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇನೆ. ಆದರೆ ಇಂದು, ರಾಜೀವ್ ಸಾತವ್(Rajeev Satav) ಅವರ ಸರಳತೆ, ನಿಸ್ಸಂದಿಗ್ಧವಾದ ನಗೆ, ನಾಯಕತ್ವ ಮತ್ತು ಪಕ್ಷದ ನಿಷ್ಠೆ ಮತ್ತು ಸ್ನೇಹ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ನನ್ನ ಗೆಳೆಯನಿಗೆ ಶುಭ ವಿದಾಯ ! ನೀವು ಎಲ್ಲಿಯೇ ಇರಿ, ಹೊಳೆಯುತ್ತಿರಿ' ಎಂದು ಬರೆದುಕೊಂಡಿದ್ದಾರೆ.
ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
ರಾಜೀವ್ ಸತವ್ ಹತ್ತಿರವಿದ್ದ ರಾಹುಲ್ ಗಾಂಧಿ :
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ(Rahul Gandhi) ಅವರ ಆಪ್ತರಾಗಿರುವ ರಾಜೀವ್ ಸತವ್ ಅವರು ಕೊರೋನಾವೈರಸ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಆದ್ರೆ ಏಪ್ರಿಲ್ 22 ರಂದು ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಕಾರಣ ಅವರನ್ನು ಪುಣೆಯ ಜಹಾಂಗೀರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ವೆಂಟಿಲೇಟರ್‌ನಲ್ಲಿದ್ದರು.
ಇದನ್ನೂ ಓದಿ : ಕರೋನಾ ವೈರಸ್ B1617 ರೂಪಾಂತರಿ ವಿರುದ್ಧವೂ ಪರಿಣಾಮಕಾರಿಯಾಗಿದೆ Covaxin ; ಅಧ್ಯಯನದಲ್ಲಿ ಬಹಿರಂಗ
ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದ ರಾಜೀವ್ :
ಕೆಲವು ದಿನಗಳ ಹಿಂದೆ ಅವರು ಕೋವಿಡ್ -19(Covid-19) ನಿಂದ ಚೇತರಿಸಿಕೊಂಡಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದ್ರೆ ಚೇತರಿಸಿಕೊಂಡ ನಂತರ ಮತ್ತೆ ಆರೋಗ್ಯ ಹದಗೆಟ್ಟಿತು ರಾಜೀವ್ ಅವರನ್ನು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ರಾಜೀವ್ ಅವರಿಗೆ ಮತ್ತೆ ಕೊರೋನಾ ಹೊಸ ಸೋಂಕಿಗೆ ಒಳಗಾಗಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು ಹಾಗಾಗಿ ಇಂದು ಮೃತಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.