ನೂತನ ವೆಬ್ ಸೈಟ್ ಬಿಡುಗಡೆ ಮಾಡಿದ ರಜನಿಕಾಂತ್; ಹೆಸರು ನೊಂದಾಯಿಸಿಕೊಳ್ಳಲು ಅಭಿಮಾನಿಗಳಿಗೆ ಮನವಿ
ರಾಜಕೀಯ ಪ್ರವೇಶ ಘೋಷಣೆ ಮಾಡಿದ ಒಂದು ದಿನದ ತರುವಾಯ ಇಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗಾಗಿ ಪ್ರತ್ಯೇಕ ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ.
ಚೆನ್ನೈ : ರಾಜಕೀಯ ಪ್ರವೇಶ ಘೋಷಣೆ ಮಾಡಿದ ಒಂದು ದಿನದ ತರುವಾಯ ಇಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗಾಗಿ ಪ್ರತ್ಯೇಕ ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ.
www.rajinimandram.org ಎಂಬ ವೆಬ್ಸೈಟ್ ಬಿಡುಗಡೆ ಮಾಡಿರುವ ರಜನಿಕಾಂತ್ ಈ ಮೂಲಕ 'ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಸಂಘ'ದಲ್ಲಿ ಅಭಿಮಾನಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
"ನಾನು ರಾಜಕೀಯ ಪ್ರವೇಶಿಸಲು ಸಿದ್ಧವಾಗಿದ್ದೇನೆ ಎಂದು ಘೋಷಿಸಿದ ಬಳಿಕ ನನಗೆ ಬೆಂಬಲ ನೀಡಿದ ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದುವರೆಗೂ ಯಾರು ಯಾವುದೇ ಅಭಿಮಾನಿಗಳ ಸಂಘದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿಲ್ಲವೋ ಮತ್ತು ಉತ್ತಮ ರಾಜಕೀಯವನ್ನು ಅಪೇಕ್ಷಿಸುತ್ತಿದ್ದಾರೆಯೋ ಅವರು ಕೂಡಲೇ www.rajinimandram.org ವೆಬ್ ಸೈಟ್ನಲ್ಲಿ ಹೆಸರು ನೊಂದಾಯಿಸುಕೊಳ್ಳುವಂತೆ ಮನವಿ ಮಾಡುತ್ತೇನೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ರಜನಿಕಾಂತ್ ಹೇಳಿದ್ದಾರೆ.
ಅಲ್ಲದೆ ಈ ಹೆಸರು ನೊಂದಾವಣಿ ಪ್ರಕ್ರಿಯೆಯು ಕೇವಲ ಮಾಹಿತಿ ವಿನಿಮಯ ಮಾಧ್ಯಮವಾಗಿ ಅಷ್ಟೇ ಅಲ್ಲ, ತಮಿಳುನಾಡಿನಲ್ಲಿ ಉತ್ತಮ ರಾಜಕೀಯ ಬದಲಾವಣೆಯನ್ನು ಬಯಸುವ ಎಲ್ಲಾ ವಿಭಾಗಗಳ ಜನರನ್ನು ಸಮಗ್ರಗೊಳಿಸುವುದಕ್ಕಾಗಿ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ರಜನಿ ಹೇಳಿದ್ದಾರೆ.