ಚೆನ್ನೈ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ರಜನಿಕಾಂತ್ ಜೊತೆ ರಾಜಕೀಯ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಎನ್ ಡಿಟಿವಿ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು "ಅದನ್ನು ಸುಲಭವಾಗಿ ಹೇಳಬಹುದು ಆದರೆ ಅದು ಸಾಧ್ಯವಾಗಬೇಕು,ಒಂದು ವೇಳೆ ನಾವಿಬ್ಬರು ಕೂಡಿದರೆ ಅದು ಸಾಧ್ಯ,ಆದರೆ ಅದಕ್ಕೆ ಅನುಗುಣವಾಗಿ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು" ಎಂದು ಅವರು ತಿಳಿಸಿದರು.


ಇದೇ ಸಂದರ್ಭದಲ್ಲಿ ತಾವಿಬ್ಬರು ಜೊತೆಯಾಗಿ ನಟಿಸದಿರುವ ಕುರಿತಾಗಿ ಮಾತನಾಡಿದ ಕಮಲ್ ಹಾಸನ್  "ತಾವು ಉದ್ದೇಶ ಪೂರ್ವಕವಾಗಿಯೇ ಒಟ್ಟಿಗೆ ನಟಿಸಲಿಲ್ಲ ಕಾರಣ ಇದು ಫಿಲಂ ನಿರ್ಮಾಣದ ವೆಚ್ಚವನ್ನು ಅಧಿಕಗೊಳಿಸುತ್ತದೆ" ಎಂದು ಅವರು ತಿಳಿಸಿದರು. 2016 ರ ಡಿಸೆಂಬರ್ ನಲ್ಲಿ ಜಯಲಲಿತಾ ನಿಧನದ ನಂತರ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರಿಬ್ಬರೂ ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ಕಮಲ್ ಹಾಸನ್ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳ ನಿಧಿ ಮಯ್ಯಂ ಎನ್ನುವ ಪಕ್ಷಕ್ಕೆ ಚಾಲನೆಯನ್ನು ಸಹ ನೀಡಿದ್ದರು. 


ಇತ್ತೀಚಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಲ್ಲದೆ ತಮ್ಮ ಬಣ್ಣ ಕಂಡಿತ ಕೇಸರಿಯಲ್ಲ ಎನ್ನುವ ಮೂಲಕ ಬಿಜೆಪಿ ತಮ್ಮ ಸೈದ್ಧಾಂತಿಕ ಮಿತ್ರ ಅಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದರು.