ಚೆನ್ನೈ: ನಟ ರಾಜಕಾರಣಿ ರಜನಿಕಾಂತ್ ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ಚುನಾವಣೆಯ ಪದ್ದತಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ  ಸಮಯ ಮತ್ತು ಹಣವನ್ನು ಕೂಡ ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಕಾನೂನು ಆಯೋಗವು ರಾಷ್ಟ್ರದ ಎಲ್ಲ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿದ್ದವು.ಆದರೆ ಈ ನಡೆಗೆ ನಾಲ್ಕು ಪಕ್ಷಗಳು ಬೆಂಬಲಿಸಿದ್ದರೆ ಒಂಬತ್ತು ಪಕ್ಷಗಳು ವಿರೋಧಿಸಿದ್ದವು.


ಈಗ ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್ " ಇಂದು ಉತ್ತಮ ವಾದದ್ದು, ಇದರಿಂದ ಹಣ ಮತ್ತು ಸಮಯವನ್ನು ಉಳಿಸಬಹುದು ಆದ್ದರಿಂದ ಎಲ್ಲ ಪಕ್ಷಗಳು ಈ ವಿಚಾರವಾಗಿ ಕೂಡಿ ಕೆಲಸ ಮಾಡಬೇಕು ಮತ್ತು ಸಹಕರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ರಜನಿಕಾಂತ್  ಇನ್ನು ಪಕ್ಷದ ಹೆಸರು ಮತ್ತು ಚಿನ್ಹೆಯನ್ನು ಅನಾವರಣಗೊಳಿಸಬೇಕಾಗಿದೆ.


ಇತ್ತಿಚೆಗಿನ ಕಾನೂನು ಆಯೋಗದ ಸಭೆಯಲ್ಲಿ ಬಹುತೇಕ ಪಕ್ಷಗಳು ಕೇಂದ್ರ ಸರಕಾರದ ಈ ನಿಲುವನ್ನು ವಿರೋಧಿಸುತ್ತಾ ಇದು ಒಕ್ಕೂಟ ವ್ಯವಸ್ಥೆಗೆ ವಿರೋಧವಾದಂತದ್ದು ಎಂದು ಅಭಿಪ್ರಾಯಪಟ್ಟರಲ್ಲದೆ ಸದ್ಯದ ಸ್ಥಿತಿಗೆ ಇದು ಯೋಗ್ಯವಲ್ಲ ಎಂದು ತಿಳಿಸಿದ್ದವು.