ರಾಜೀವ್ ಗಾಂಧೀ ಹತ್ಯೆ: ಅಪರಾಧಿಗಳ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಕೇಳಿದ ಸುಪ್ರಿಂಕೋರ್ಟ್
ನವದೆಹಲಿ: ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ಏಳು ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸುವ ತಮಿಳುನಾಡು ಸರಕಾರದ ಪ್ರಸ್ತಾಪವನೆಯ ಕುರಿತಾಗಿ ಅಂತಿಮ ನಿರ್ಧಾರ ನಿಭಾಯಿಸಲು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ಮಂಗಳವಾರ ಕೇಳಿದೆ. ಅಲ್ಲದೆ ಕೇಂದ್ರ ಸರ್ಕಾರವು ಈ ವಿಚಾರವಾಗಿ ತನ್ನ ಅಭಿಪ್ರಾಯವನ್ನು ತಿಳಿಸಲು ಸುಪ್ರೀಂ ಕೋರ್ಟ್ ಮೂರು ತಿಂಗಳುಗಳ ಕಾಲಾವಕಾಶ ನೀಡಿದೆ.
ಎರಡು ವರ್ಷಗಳ ಹಿಂದೆ, ತಮಿಳುನಾಡು ಸರ್ಕಾರವು ಪೆರರಿವಾಲನ್, ಮುರುಗನ್, ಸಂತಾನ್, ನಳಿನಿ, ರಾಬರ್ಟ್ ಪಿಯೇಸ್, ಜಯಕುಮಾರ್ ಮತ್ತು ರವಿಚಂದ್ರನ್ ಅವರು ಈಗಾಗಲೇ 24 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಅವರನ್ನು ಜೈಲುಗಳಿಂದ ಬಿಡುಗಡೆ ಮಾಡಲು ಇಚ್ಚಿಸಿತ್ತು.
ಆದರೆ ಈ ವಿಷಯ ನ್ಯಾಯಾಂಗದ ಅಡಿಯಲ್ಲಿರುವುದರಿಂದ ಕೇಂದ್ರ ಸರ್ಕಾರವು ತಮಿಳುನಾಡಿನ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.ಆದರೆ ಈಗ ಸುಪ್ರಿಂ ಕೋರ್ಟ್ ಈ ವಿಚಾರವಾಗಿ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೇಳಿದೆ.
with ANI Inputs