ನವದೆಹಲಿ: ಸ್ವಾತಂತ್ರ್ಯ ಬರುವ ಒಂದು ವರ್ಷದ ಮೊದಲು ಲಿಯಾಖತ್ ಅಲಿ ಖಾನ್ ತಮ್ಮ ಬಜೆಟ್ನಲ್ಲಿ ದೇಶದಲ್ಲಿ ತೆರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ, ದೊಡ್ಡ ಉದ್ಯಮಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಯಿತು. ನಂತರದಲ್ಲಿ ಹಣಕಾಸು ಮಂತ್ರಿಗಳು ಕಾಲಕಾಲಕ್ಕೆ ತೆರಿಗೆ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತಂದರು. ಜೊತೆಗೆ ಹೊಸ ತೆರಿಗೆ ವ್ಯವಸ್ಥೆಗಳನ್ನೂ ಸಹ ಪರಿಚಯಿಸಿದರು. ಅದೇ ರೀತಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ದೇಶಕ್ಕೆ 'ಕಾರ್ಪೊರೇಟ್ ತೆರಿಗೆ'ಯನ್ನು ಪರಿಚಯಿಸಿದರು. 


COMMERCIAL BREAK
SCROLL TO CONTINUE READING

ರಾಜೀವ್ ಗಾಂಧಿ ಮಂತ್ರಿಮಂಡಲದಲ್ಲಿ ವಿತ್ತ ಸಚಿವರಾಗಿದ್ದ ವಿ.ಪಿ.ಸಿಂಗ್(ವಿಶ್ವನಾಥ್ ಪ್ರತಾಪ್ ಸಿಂಗ್) ಭ್ರಷ್ಟಾಚಾರ ಆರೋಪದಡಿಯಲ್ಲಿ 1987ರ ಜನವರಿ 24ರಂದು ರಾಜೀನಾಮೆ ನೀಡಿದರು. ಪರಿಣಾಮವಾಗಿ 1987-88ರ ಹಣಕಾಸು ವರ್ಷದಲ್ಲಿ ಪ್ರಧಾನಿ ರಾಜೀವ್ ಗಾಂಧಿ ಬಜೆಟ್ ಮಂಡಿಸಿದರು. ಹಣಕಾಸು ಸಚಿವರಾಗಿದ್ದಾಗ, ವಿ.ಪಿ. ಸಿಂಗ್ ದೇಶದ ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದರು. ಹಾಗಾಗಿ ರಾಜೀವ್ ಗಾಂಧಿ ಆ ಬಜೆಟ್ ನಲ್ಲಿ ವಿವಿಧ ತೆರಿಗೆಗಳನ್ನು ಹೊರತುಪಡಿಸಿ, ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗುವಂತೆ ಕಾರ್ಪೊರೇಟ್ ವಲಯಕ್ಕೆ ಪ್ರತ್ಯೇಕ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದರು.