ನವದೆಹಲಿ : ಪಾಕಿಸ್ತಾನದ ಗಡಿ ದಾಳಿಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ಸೋಮವಾರ ಖಂಡಿಸಿದ್ದು, ನೆರೆ ರಾಷ್ಟ್ರಕ್ಕೆ ಸೇನೆಯು ತಕ್ಕ ಉತ್ತರ ನೀಡಲಿದೆ ಎಂದಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಭಾರತೀಯ ಸೈನಿಕರು ಸೇರಿದಂತೆ ಓರ್ವ ಕ್ಯಾಪ್ಟನ್ ಮೃತಪಟ್ಟಿದ್ದರು.


COMMERCIAL BREAK
SCROLL TO CONTINUE READING

"ನಮ್ಮ ಸೈನಿಕರ ಶೌರ್ಯದಲ್ಲಿ ಪೂರ್ಣ ನಂಬಿಕೆಯನ್ನು ಹೊಂದ್ದು, ಅವರು ನೆರೆ ರಾಷ್ಟಕ್ಕೆ ತಕ್ಕ ಉತ್ತರವನ್ನು ನೀಡಬೇಕು" ರಾಜನಾಥ್ ಸಿಂಗ್ ಅವರು ಐಎನ್ಎಸ್ ಗೆ ಹೇಳಿದ್ದಾರೆ.


ಹಿಂದಿನ, ಗೃಹ ವ್ಯವಹಾರಗಳ ರಾಜ್ಯ ಸಚಿವ ಹನ್ಸ್ರಾಜ್ ಅಹಿರ್ ಅವರೂ ಸಹ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಭಾನುವಾರ ನಡೆದ ಕದನ ವಿರಾಮದ ಉಲ್ಲಂಘನೆಯನ್ನು ಖಂಡಿಸಿದ್ದರು.


"ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಈ ವರ್ಷದಲ್ಲಿ ಕದನ ವಿರಾಮದ ಉಲ್ಲಂಘನೆ ಹೆಚ್ಚಾಗಿದೆ" ಎಂದು ಅವರು ಹೇಳಿದರು.


"ನಿನ್ನೆ (ಭಾನುವಾರ) ಅವರು ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ, ನಾವು ಪಾಕಿಸ್ತಾನದ ಕ್ರಮಗಳನ್ನು ಕ್ಷಮಿಸುವುದಿಲ್ಲ" ಎಂದಿರುವ ಅಹಿರ್, "ಕದನ ವಿರಾಮ ಉಲ್ಲಂಘನೆಗಳು ಪಾಕಿಸ್ತಾನದ ಮೂರ್ಖತನದ ಪರಮಾವಧಿ ಎಂದು ಸಾಬೀತಾಗಿದೆ" ಎಂದು ಅವರು ಹೇಳಿದರು.


ಭಾನುವಾರ, ಕ್ಯಾಪ್ಟನ್ ಕಪಿಲ್ ಕುಂದು ಸೇರಿದಂತೆ ನಾಲ್ವರು ಸೈನಿಕರು ಈ ಘಟನೆಯಲ್ಲಿ ಸಾವನ್ನಪ್ಪಿದ್ದರಲ್ಲದೆ, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಇತರ ನಾಲ್ಕು ಮಂದಿ ಗುಂಡಿನ ಕಾಳಗದಲ್ಲಿ ತೀವ್ರ ಗಾಯಗೊಂಡಿದ್ದರು. 


ಇವರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನ ಬರಾಕಾ ಹಳ್ಳಿಯ ರೈಫಲ್ಮೆನ್ ರಾಮಾವತಾರ್(27), ಜಮ್ಮು ಮತ್ತು ಕಾಶ್ಮೀರದ ಸಾಂಬಾದ ಕತುವಾ ಮತ್ತು ಹಾವಿಲ್ಡರ್ ರೋಷನ್ ಲಾಲ್ (43), ಸುಭಾಮ್ ಸಿಂಗ್ (23) ಎಂಬವರು ಸೇರಿದ್ದಾರೆ.


ಏತನ್ಮಧ್ಯೆ, ಭಾರತವು "ಪಾಕಿಸ್ತಾನಕ್ಕೆ ಯೋಗ್ಯ ಪ್ರತ್ಯುತ್ತರವನ್ನು" ನೀಡುವ ನಿಟ್ಟಿನಲ್ಲಿ ಮುಂದುವರಿಯಲಿದೆ ಎಂದು ಸೈನ್ಯದ ಉಪಾಧ್ಯಕ್ಷ ಸೋಮವಾರ ಹೇಳಿದ್ದಾರೆ. ಗಡಿನಾಡಿನ ಭಯೋತ್ಪಾದಕರ ದಾಳಿಗೆ ಪಾಕಿಸ್ತಾನಿ ಸೇನೆಯು ಉತ್ತೇಜನ ನೀಡುತ್ತಿದೆ ಎಂದು ಆರ್ಮಿ ಉಪಾಧ್ಯಕ್ಷ ಶರತ್ ಚಂದ್ ಅಭಿಪ್ರಾಯಪಟ್ಟಿದ್ದಾರೆ.