Ayodhya ram mandir Live : ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಸ್ವಾಗತಕ್ಕಾಗಿ ಸಾವಿರಾರು ಜನರು ಕಾಯುತ್ತಿದ್ದಾರೆ. ಅಲ್ಲದೆ ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಲ್ಲಿ ಜನರು ಕಾಯುತ್ತಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮ ದೇಶಾದ್ಯಂತ 160ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ನೇರಪ್ರಸಾರವಾಗಲಿದ್ದು, ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಬಹುದು.


COMMERCIAL BREAK
SCROLL TO CONTINUE READING

ಅಲ್ಲದೆ, ಟಿಕೆಟ್ ದರವನ್ನೂ ಕೇವಲ 100 ರೂಪಾಯಿಗೆ ನಿಗದಿಪಡಿಸಲಾಗಿದೆ. ನೂರು ರೂಪಾಯಿ ಜಾಸ್ತಿ ಅಂತ ನೀವು ತಿಳಿದುಕೊಂಡರೆ, ಇಲ್ಲೊಂದು ಟ್ವಿಸ್ಟ್ ಇದೆ.. ಥಿಯೇಟರ್‌ಗೆ ಹೋದವರಿಗೆ ಪಾಪ್ ಕಾರ್ನ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಈ ಅದ್ಭುತ ಯೋಜನೆಯನ್ನು ಆಜ್ ತಕ್ ಮತ್ತು ಪಿವಿಆರ್ ನಿಮ್ಮ ಮುಂದಿಟ್ಟಿದೆ.


ಇದನ್ನೂ ಓದಿ:ವೇಗವಾಗಿ ಮುನ್ನುಗ್ಗುತ್ತಿರುವ ರೈಲ್ವೆ ಸ್ಟಾಕ್ಸ್; IRFC, RVNL, IRCTC ಷೇರು ಭಾರೀ ಜಿಗಿತ !


ಮನೆಯಲ್ಲಿ ಕುಳಿತು ಲೈವ್ ಟೆಲಿಕಾಸ್ಟ್ ನೋಡುವ ಬದಲು ಥಿಯೇಟರ್‌ಗೆ ಹೋಗುವ ಅವಶ್ಯಕತೆ ಏನಿದೆ? ಅಂತ ನಿಮ್ಮಲ್ಲಿ ಹಲವರು ಯೋಚಿಸುತ್ತಾರೆ.. ಎಲ್ಲರ ಮನೆಯಲ್ಲಿ ದೊಡ್ಡ ಪರದೆಗಳಿಲ್ಲ, ಅಲ್ಲದೆ, ದೊಡ್ಡ ಪರದೆಯಲ್ಲಿ ನೋಡುವ ಅನುಭವ ಟವಿಯಲ್ಲಿ ಸಿಗುವುದಿಲ್ಲ. ಎಲ್ಲರಿಗೂ ರಾಮನನ್ನು ಹತ್ತಿರದಿಂದ ನೋಡುವಂತೆ ಭಾಸವಾಗುತ್ತದೆ. ಹಾಗಾಗಿಯೇ ಈ ಸುಂದರ ದೃಶ್ಯವನ್ನು ಥಿಯೇಟರ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. 


ಈ ಹಿಂದೆ ಕುತೂಹಲಕಾರಿ ಕ್ರಿಕೆಟ್ ಪಂದ್ಯಾವಳಿಗಳನ್ನ ಚಿತ್ರಮಂದಿರಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಈಗ ದೇವಸ್ಥಾನಗಳನ್ನು ತೆರೆಯುವುದರೊಂದಿಗೆ ಈ ಹೊಸ ಟ್ರೆಂಡ್ ಕೂಡ ಪ್ರಾರಂಭವಾಗಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. 22ರಂದು ಶ್ರೀರಾಮಚಂದ್ರನನ್ನು ಕಣ್ತುಂಬಿಕೊಳ್ಳಲು ಜನ ಟಿಕೆಟ್ ಕಾಯ್ದಿರಿಸಲು ಸಿದ್ಧರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.