ಸೇತುಸಮುದ್ರಂ ಯೋಜನೆಯಿಂದ ರಾಮಸೇತುವಿಗೆ ಹಾನಿ ಮಾಡುವುದಿಲ್ಲ : ಕೇಂದ್ರ ಸ್ಪಷ್ಟನೆ
ಸೇತು ಸಮುದ್ರಂ ಯೋಜನೆಯಿಂದ ಪೌರಾಣಿಕ ರಾಮಸೇತುಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್ಗೆ ಸ್ಪಷ್ಟಪಡಿಸಿದೆ.
ನವದೆಹಲಿ: ಸೇತು ಸಮುದ್ರಂ ಯೋಜನೆಯಿಂದ ಪೌರಾಣಿಕ ರಾಮಸೇತುಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್ಗೆ ಸ್ಪಷ್ಟಪಡಿಸಿದೆ.
ಈ ವಿಷಯದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದ ಕೇಂದ್ರ ಸರ್ಕಾರ "ರಾಷ್ಟ್ರದ ದೃಷ್ಟಿಯಿಂದ" ರಾಮಸೇತುವನ್ನು ಮುಟ್ಟುವುದನ್ನು ತಡೆಯಲಾಗಿದ್ದು, ಪರ್ಯಾಯ ಮಾರ್ಗ ಹುಡುಕುವುದು ನಮ್ಮ ಉದ್ದೇಶವಾಗಿದೆ" ಎಂದು ಕೇಂದ್ರ ನೌಕಾ ಸಾರಿಗೆ ಇಲಾಖೆ ಸುಪ್ರೀಂಕೋರ್ಟ್'ಗೆ ಸಲ್ಲಿಸಿರುವ ಅಫಿಡವಿಟ್'ನಲ್ಲಿ ಹೇಳಿದೆ.
ಕೇಂದ್ರದ ಪರವಾಗಿ ಮಾತನಾಡಿದ, ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, "ಈ ಹಿಂದೆ ಸುಪ್ರಿಂ ಕೋರ್ಟ್ ನೀಡಿದ್ದ ನಿರ್ದೇಶನಗಳಿಗೆ ಅನುಸಾರವಾಗಿ ಕೇಂದ್ರ ಅಫಿಡವಿಟ್ ಸಲ್ಲಿಸಿದ್ದು, ಈಗ ಪಿಐಎಲ್ ಅನ್ನು ಇತ್ಯರ್ಥಗೊಳಿಸಬಹುದು" ಎಂದಿದ್ದಾರೆ.