ನವದೆಹಲಿ: ಅಯೋಧ್ಯೇಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಫೆಬ್ರವರಿ 21 ರಿಂದ ಆರಂಭವಾಗಲಿದೆ ಎಂದು ಪರಮ ಧರ್ಮ ಸಂಸದ್ ಘೋಷಿಸಿದೆ. 


COMMERCIAL BREAK
SCROLL TO CONTINUE READING

ಬುಧುವಾರದಂದು ನಡೆದ ಧಾರ್ಮಿಕ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಧರ್ಮ ಸಂಸದ್ ಸಭೆಯಲ್ಲಿ ಧಾರ್ಮಿಕ ಮುಖಂಡರೆಲ್ಲ ಮಾತನಾಡುತ್ತಾ ಸುಪ್ರೀಂ ಕೋರ್ಟ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ತಾವು ಗೌರವಿಸುತ್ತೇನೆ. ಆದರೆ, ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುವ ಸಮಯ ಈಗ ಬಂದಿದೆ ಎಂದು ತಿಳಿಸಿದರು.


ದೇವಾಲಯಕ್ಕೆ ಅಡಿಪಾಯವನ್ನು ಹಾಕಲು ಮತ್ತು ಅದರ ನಿರ್ಮಾಣವನ್ನು ಪ್ರಾರಂಭಿಸಲು ನಾಲ್ಕು ಕಲ್ಲುಗಳನ್ನು ಅಯೋಧ್ಯೆಗೆ ಒಯ್ಯುತ್ತೇವೆ ಎಂದು ಹೇಳಿದರು. "ನಾವು ನ್ಯಾಯಾಲಯಗಳು ಮತ್ತು ದೇಶದ ಪ್ರಧಾನಿಗಳನ್ನು ಗೌರವಿಸುತ್ತೇವೆ ಆದರೆ ನಾವು ನಾಲ್ಕು ಕಲ್ಲುಗಳನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗುತ್ತೇವೆ. ಆದರೆ, ಈ ಸಂದರ್ಭದಲ್ಲಿ ನಾವು ಸೆಕ್ಷನ್ 144 ಅನ್ನು ಉಲ್ಲಂಘಿಸುವುದಿಲ್ಲ ಎಂದು ತಿಳಿಸಿದರು. ದೇವಸ್ಥಾನ ನಿರ್ಮಾಣಕ್ಕೆ ಸಮಯ ಬೇಕಾಗುತ್ತದೆ ಒಂದು ವೇಳೆ ದೇವಸ್ತಾನ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸದಿದ್ದಲ್ಲಿ ಅದು ಎಂದಿಗೂ ಈಡೇರಿವುದಿಲ್ಲ ಎಂದು ಸಂತರು ಹೇಳಿದರು.


ಅಯೋಧ್ಯೇಯಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ 67 ಎಕರೆ ಹೆಚ್ಚುವರಿ ಖಾಲಿ ಭೂಮಿಯನ್ನು ಮೂಲ ಮಾಲಿಕರಿಗೆ ಹಿಂದುರಿಗಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.ಈಗ ಈ ಹಿನ್ನಲೆಯಲ್ಲಿ ಧರ್ಮ ಸಂಸದ್ ನ ಹೇಳಿಕೆ ಬಂದಿದೆ.1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ 67 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ವಿಚಾರವನ್ನು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಅದರಲ್ಲಿ 2.77 ಎಕರೆ ಮಾತ್ರ ವಿವಾದಾತ್ಮಕವಾಗಿದೆ ಮತ್ತು ಉಳಿದ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಬೇಕು ಎಂದು ಸರ್ಕಾರ ಕೇಳಿಕೊಂಡಿದೆ.