ರಾಬ್ಡಿದೇವಿಯನ್ನು ಅನಕ್ಷರಸ್ಥಳು ಎಂದಿದ್ದಕ್ಕೆ ಕೇಂದ್ರ ಸಚಿವ ಪಾಸ್ವಾನ್ ಮೇಲೆ ಪುತ್ರಿ ಗರಂ
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಕುರಿತಾಗಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿಕೆಗೆ ಪುತ್ರಿ ಆಶಾ ಕೆಂಡಾಮಂಡಲವಾಗಿದ್ದಾಳೆ ಅಲ್ಲದೆ ತಮ್ಮ ಹೇಳಿಕೆ ಪಾಸ್ವಾನ್ ಕ್ಷಮೆಯಾಚಿಸದಿದ್ದಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ.
ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಕುರಿತಾಗಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿಕೆಗೆ ಪುತ್ರಿ ಆಶಾ ಕೆಂಡಾಮಂಡಲವಾಗಿದ್ದಾಳೆ ಅಲ್ಲದೆ ತಮ್ಮ ಹೇಳಿಕೆ ಪಾಸ್ವಾನ್ ಕ್ಷಮೆಯಾಚಿಸದಿದ್ದಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ.
ರಾಮ್ ವಿಲಾಸ್ ಪಾಸ್ವಾನ್ ಶುಕ್ರವಾರದಂದು ರಾಬ್ಡಿದೇವಿ ಮೇಲೆ ವಾಗ್ದಾಳಿ ನಡೆಸುತ್ತಾ "ಇಂದು ಯಾವುದೇ ಅನಕ್ಷರಸ್ಥರು ಕೂಡ ಮುಖ್ಯಮಂತ್ರಿಯಾಗುತ್ತಿದ್ದಾರೆ.ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಸ್ವಾನ್ ಪುತ್ರಿ ಆಶಾ ಒಂದು ವೇಳೆ ಅವರು ಕ್ಷಮೆ ಕೊರದಿದ್ದಲ್ಲಿ ಲೋಕಜನಶಕ್ತಿ ಪಾರ್ಟಿಯ ಆಫಿಸ್ ಮುಂದೆ ಮಹಿಳೆರೊಂದಿಗೆ ಪ್ರತಿಭಟನೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಆಶಾ ಪತಿ ಅನಿಲ್ ಸಾಧು ಆರ್ಜೆಡಿ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಆಶಾ ಇನ್ನು ಮುಂದುವರೆದು ಪಾಸ್ವಾನ್ ವಿರುದ್ದ ಮಾತನಾಡುತ್ತಾ " ನಾವು ಅನಕ್ಷರಸ್ಥರಾಗಿದ್ದೆವು ಅದಕ್ಕೆ ರಾಮ್ ವಿಲಾಸ್ ಪಾಸ್ವಾನ್ ನಮ್ಮನ್ನು ಬಿಟ್ಟು ಹೋದರು,ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಅವರ ಹೇಳಿಕೆ ಎಲ್ಲ ಅನಕ್ಷರಸ್ಥ ಮಹಿಳೆಯರಿಗೆ ಅವಮಾನ ಮಾಡಿದ ಹಾಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಶಾ ಅವರು ಪಾಸ್ವಾನ್ ಮೊದಲ ಪತ್ನಿ ರಾಜಕುಮಾರಿ ದೇವಿಯವರ ಮಗಳು.1981ರಲ್ಲಿ ಯಾವಾಗ ರಾಮ್ ವಿಲಾಸ್ ಪಾಸ್ವಾನ್ ರೀನಾರನ್ನು ಮದುವೆಯಾದರೋ ಆಗ ಮೊದಲ ಪತ್ನಿಗೆ ವಿಚ್ಚೆಧನ ನೀಡಿದರು