ಪಾಟ್ನಾ: ಬಿಹಾರ ಉಪಮುಖ್ಯಮಂತ್ರಿ ಮತ್ತು ಹಿರಿಯ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಜಯವನ್ನು ಲಾರ್ಡ್ 'ರಾಮ' ಜಯ ಸಾಧಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿ ಯನ್ನು 'ಹಜ್' ಎಂದು ಉಲ್ಲೇಖಿಸುತ್ತಾ ಹಜ್ ವಿರುದ್ಧ ರಾಮನಿಗೆ ಜಯ ಎಂದು ಟ್ವೀಟ್ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

99 ಸ್ಥಾನಗಳೊಂದಿಗೆ ಗುಜರಾತ್ನಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ, ಕಾಂಗ್ರೆಸ್ನಿಂದ ಕಠಿಣ ವಿರೋಧವನ್ನು ಎದುರಿಸಿತು. ಎರಡೂ ಪಕ್ಷಗಳು ತಮ್ಮ ಮತ ಹಂಚಿಕೆಯನ್ನು ಹೆಚ್ಚಿಸಿವೆ - ಬಿಜೆಪಿ ಶೇ. 1.25 ಮತ್ತು ಕಾಂಗ್ರೆಸ್ ಶೇ. 2.47 ರಷ್ಟು ತಮ್ಮ ಮತ ಹೆಚ್ಚಿಸಿ ಕೊಂಡಿವೆ.



ಬಿಜೆಪಿಯ ಈ ವಿಜಯ, ನೋಟುರದ್ಧತಿ ವಿರುದ್ಧ ಧ್ವನಿ ಎತ್ತಿದವರಿಗೆ ಮತ್ತು GST ಅನ್ನು 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಕರೆದವರಿಗೆ ಉತ್ತರ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.



ಜಾತಿ ರಾಜಕಾರಣ, ಪ್ರಬಲ ವಿರೋಧದ ನಡುವೆಯೂ ಸತತ ಆರನೇ ಬಾರಿಗೆ ಗುಜರಾತ್ ನಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಿದೆ ಎಂದು ಅವರು ಹೇಳಿದರು.


ಮತ್ತೊಂದೆಡೆ, ಕಾಂಗ್ರೆಸ್ 1990ರ ನಂತರದಲ್ಲಿ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದೆ. ಓಬಿಸಿ ನಾಯಕ ಅಲ್ಪೇಶ್ ಠಾಕೋರ್ ಅವರು ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದಿದ್ದಾರೆ. ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸದೆ ಸ್ವತಂತ್ರರಾಗಿ ಸ್ಪರ್ಧಿಸಿದರು. ರಾಜ್ಯದಲ್ಲಿ ಬಿಜೆಪಿಯ ವಿಜಯವನ್ನು ನಿರಾಕರಿಸಿದ ಪಟಿದರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ನಾಯಕ ಹಾರ್ದಿಕ್ ಪಟೇಲ್, "ಚಾಣಕ್ಯ ನೀತಿ ಇಲ್ಲ, ಕೇವಲ ಹಣದ ಶಕ್ತಿ ಮತ್ತು ಇವಿಎಂ ರಿಗ್ಗಿಂಗ್ ಇತ್ತು" ನಿಂದ  ಗುಜರಾತ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ.