ಸೀತಾರಾಂ ಯೆಚೂರಿ ವಿರುದ್ಧ ಬಾಬಾ ರಾಮದೇವ್ ದೂರು ದಾಖಲು
ಸಿಪಿಐ ನಾಯಕ ಸೀತಾರಾಂ ಯಚೂರಿ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ದೂರು ದಾಖಲಿಸಿದ್ದಾರೆ.
ಹರಿದ್ವಾರ: 'ರಾಮಾಯಣ ಮತ್ತು ಮಹಾಭಾರತ' ಮಹಾಕಾವ್ಯಗಳು ಹಿಂಸಾಚಾರ ಮತ್ತು ಯುದ್ಧಗಳ ನಿದರ್ಶನಗಳಾಗಿವೆ ಎಂದು ಹೇಳಿದ್ದ ಸಿಪಿಐ ನಾಯಕ ಸೀತಾರಾಂ ಯಚೂರಿ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ದೂರು ದಾಖಲಿಸಿದ್ದಾರೆ.
ಹರಿದ್ವಾರದಲ್ಲಿ ಪೊಲೀಸರಿಗೆ ದೂರು ನೀಡಿದ ಬಳಿಕ ಮಾತನಾಡಿದ ಬಾಬಾ ರಾಮದೇವ್, ನಮ್ಮ ಪೂರ್ವಜರನ್ನು ಅವಮಾನಿಸಿದ ಯೆಚೂರಿ ವಿರುದ್ಧ ದೂರು ದಾಖಲಿಸಿದ್ದೇವೆ. ಅವರ ಬಂಧನವಾಗಬೇಕು. ಈ ಬಗ್ಗೆ ತೀವ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇವೆ" ಎಂದರು.
ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಾ, ಹಿಂದುಗಳು ಹಿಂಸೆಯ ಸ್ವಭಾವದವರು, ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳೇ ಇದಕ್ಕೆ ಸಾಕ್ಷಿ. ಬಹಳಷ್ಟು ರಾಜರು ಯುದ್ಧದಲ್ಲಿ ತೊಡಗಿದ್ದರು ಎಂದು ಯೆಚೂರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.