ನವದೆಹಲಿ: ಹೀಗಂತ ಹೇಳಿದ್ದು ಜಗತ್ತಿನ ಪ್ರಭಾವಿ ಆಂಗ್ಲ ದೈನಿಕ ನ್ಯೂಯಾರ್ಕ್ ಟೈಮ್ಸ್. ಹೌದು, ಯೋಗ  ಗುರು ರಾಮ್ ದೇವ್ ರನ್ನು ಕುರಿತು ಇತ್ತೀಚಿಗೆ ನ್ಯೂಯಾರ್ಕ್  ಟೈಮ್ಸ್  ಪ್ರಕಟಿಸಿದ 'The Billionaire Yogi Behind Modi’s Rise' ಎನ್ನುವ ಲೇಖನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಲೇಖನದಲ್ಲಿ ಅದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯೋಗ ಗುರು  ರಾಮದೇವ್ ಅವರ ನಡುವಿರುವ ಸಾಮ್ಯತೆಯನ್ನು ಚರ್ಚಿಸುತ್ತಾ " ರಾಮದೇವ್  ಭಾರತಕ್ಕೆ ಡೊನಾಲ್ಡ್ ಟ್ರಂಪ್ ಇದ್ದ ಹಾಗೆ ಅಲ್ಲದೆ ಅವರು ಮುಂದೊಂದು ದಿನ ಪ್ರಧಾನಿಯಾಗುವ ಸಾಧ್ಯತೆಯೂ ಇದೇ ಎಂದು ಅದು ಅಭಿಪ್ರಾಯಪಟ್ಟಿದೆ.  


ನ್ಯೂಯಾರ್ಕ್ ಟೈಮ್ಸ್ ಟ್ರಂಪ್ ಮತ್ತು ರಾಮದೇವ್ ನಡುವಿನ ಸಾಮ್ಯತೆಯನ್ನು ಚರ್ಚಿಸಿಸುತ್ತಾ " ಟ್ರಂಪ್ ರೀತಿ ರಾಮದೇವ್ ಕೂಡ ಬಿಲಿಯನ್ ಡಾಲರ್ ಸಾಮ್ರಾಜ್ಯದ ನೇತೃತ್ವವನ್ನು ವಹಿಸಿದ್ದಾರೆ. ಅಲ್ಲದೆ ಅವರು ಟಿವಿಗೆ ಹೊಂದುವ ಮತ್ತು ಸತ್ಯವನ್ನು ಎಲಾಸ್ಟಿಕ್ ನಂತೆ ಎಳೆಯುವ ವ್ಯಕ್ತಿತ್ವವಿದೆ ಮತ್ತು ಅವರ ಬ್ರ್ಯಾಂಡ್ ನ್ನು ಯಾರಿಗೂ ಕೂಡ ತಡೆಯಲು ಸಾಧ್ಯವಿಲ್ಲ ಅವರ ಹೆಸರು ಮತ್ತು ಮುಖ ಪರಿಚಯ ಇಡೀ ಭಾರತದಾದ್ಯಂತ ಚಿರಪಚಿತ ಎಂದು ಅದು ಅಭಿಪ್ರಾಯಪಟ್ಟಿದೆ.


ಈ ಹೋಲಿಕೆ ಒಂದು ರೀತಿಯಲ್ಲಿ ನಿಜವೂ ಹೌದು, ಕಾರಣವಿಷ್ಟೇ ರಾಮದೇವ್ ಅವರ ಪತಂಜಲಿ ಮತ್ತು ಟ್ರಂಪ್ ಅವರ ಬುಸಿನೆಸ್ ಎಂಟರ್ ಪ್ರೈಸ್ ಗಳಲ್ಲಿ ಸಾಕಷ್ಟು ಸಾಮ್ಯತೆ ಇರುವುದನ್ನು ನಾವು ಗಮನಿಸಬಹುದು.