Baba Ramdev: ಕೊರೊನಾ ನಿಗ್ರಹಕ್ಕೆ ಔಷಧಿ ಅಭಿವೃದ್ಧಿಪಡಿಸಿದ `ಪತಂಜಲಿ`..!
ಕೊರೊನಾ ವೈರಸ್ ನಿಗ್ರಹಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್ ಸಂಸ್ಥಾನದ ಪತಂಜಲಿ ಸಂಸ್ಥೆ `ಕೊರೊನಿಲ್ ಔಷಧಿ`ಯನ್ನ ಅಭಿವೃದ್ಧಿ
ನವದೆಹಲಿ: ಕೊರೊನಾ ವೈರಸ್ ನಿಗ್ರಹಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್ ಸಂಸ್ಥಾನದ ಪತಂಜಲಿ ಸಂಸ್ಥೆ 'ಕೊರೊನಿಲ್ ಔಷಧಿ'ಯನ್ನ ಅಭಿವೃದ್ಧಿ ಪಡೆಸಿದ್ದು, ಇಂದು ಬಿಡುಗಡೆ ಮಾಡಲಾಯ್ತು.
ಶುಕ್ರವಾರ ದೆಹಲಿಯ ಕನ್ಸ್‌ಟ್ಯೂಷನ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಮದೇವ್(Baba Ramdev) ಈ ಘೋಷಣೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
Jobs in Indian Navy : ಜಸ್ಟ್ SSLC ಪಾಸ್ ಸಾಕು.! ನಿಮ್ಮ ಹೆಮ್ಮೆಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣಾವಕಾಶ.!
ಔಷಧ ಬಿಡುಗಡೆಯ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮದೇವ್, 'ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಕೋವಿಡ್(Covid) ಸೋಂಕನ್ನ ಗುಣಪಡಿಸುತ್ತದೆ. ಆಯುಷ್ ಸಚಿವಾಲಯವು ಕರೋನಿಲ್ ಮಾತ್ರೆಗಳನ್ನು ಸಹಾಯಕ ಔಷಧಿಯಾಗಿ ಸ್ವೀಕರಿಸಿದೆ. ಇಂದು ನಿಜಕ್ಕೂ ಐತಿಹಾಸಿಕ ದಿನ. ಈ ಔಷಧಿ WHO-GMP ಪ್ರಮಾಣಿತವಾಗಿದೆ ಎಂದು ರಾಮದೇವ್ ಹೇಳಿದರು.
'ನಿಮ್ಮ ಮರಣ ನೋಂದಣಿ ವಿನಂತಿಯನ್ನು ಅನುಮೋದಿಸಲಾಗಿದೆ"
ಕೊರೊನಿಕ್ ಟ್ಯಾಬ್ಲೆಟ್ ಕೇವಲ ರೋಗನಿರೋಧಕ ಎಂದು ಕರೆಯಲಾಗುತ್ತಿತ್ತು. ಆದ್ರೆ, ಮೂರು ದಿನಗಳಲ್ಲಿ 70 ಪ್ರತಿಶತದಷ್ಟು ರೋಗಿಗಳು ಈ ಔಷಧಿ(Medicine) ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿದೆ.
ಈ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳ, ಈ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.