ಗೋಂಡ: ಅತ್ಯಾಚಾರ ಎಸಗಿದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ದೊರೆತ ಹಿನ್ನೆಲೆಯಲ್ಲಿ ಮನನೊಂದ ಸಂತ್ರಸ್ತ ಮಹಿಳೆ ನೀನು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಉತ್ತರಪ್ರದೇಶದ ಗೋಂಡಾ ಜಿಲ್ಲೆಯ ಕರ್ನಲ್ಗಂಜ್ ಪ್ರದೇಶದ ನಿವಾಸಿಯಾದ ಸಂತ್ರಸ್ತ ಮಹಿಳೆ(35)ಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. "ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ಆಕೆಗೆ ನ್ಯಾಯ ದೊರೆಯಲಿಲ್ಲ" ಎಂದು ಸಂತ್ರಸ್ತ ಮಹಿಳೆಯ ಪತಿ ಆರೋಪಿಸಿದ್ದಾರೆ.



"ಆರೋಪಿಗಳು ನನ್ನ ಪತ್ನಿಯ ಮೇಳೆ ಅತ್ಯಾಚಾರ ಎಸಗಿದ್ದಷ್ಟೇ ಅಲ್ಲದೆ, ಅದನ್ನು ವೀಡಿಯೋ ಸಹ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ತಿಳಿದು ಆಕೆ ತುಂಬಾ ಬೇಸರಗೊಂಡಿದ್ದಳು. ಇದೇ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತು" ಎಂದು ಪತಿ ಹೇಳಿದ್ದಾರೆ.


ಇಬ್ಬರು ಆರೋಪಿಗಳಾದ ಶಂಕರ್ ದಯಾಳ್ ಮತ್ತು ಆತನ ತಮ್ಮ ಅಶೋಕ್ ಕುಮಾರ್ ಇಬ್ಬರೂ ಆಕೆಯ ಮೇಲೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಅತ್ಯಾಚಾರ ಎಸಗಿದ್ದರು. ಆರಂಭದಲ್ಲಿ ಸ್ಥಳೀಯ ಪೋಲಿಸರಿಂದ ತನಿಖೆ ನಡೆಸಲಾಗಿತ್ತಾದರೂ ಬಳಿಕ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ತನಿಖೆ ವಹಿಸಿಕೊಂಡಿದ್ದರು. ಆದರೆ ಎರಡೂ ತನಿಖೆಗಳಲ್ಲಿ ಆರೋಪಿಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಕ್ಲೀನ್ ಚಿಟ್ ನೀಡಲಾಗಿತ್ತು. ಇದರಿಂದ ಮನನೊಂದ ಮಹಿಳೆ 15 ದಿನಗಳ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.