ಅಪರೂಪದ VIDEO: ನರೇಂದ್ರ ಮೋದಿ ಅವರು ಅಟಲ್ ಜೀ ಬಳಿ ಓಡಿ ಬಂದಾಗ...
ಇದು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಅಪರೂಪದ ವಿಡಿಯೋ. ಈ ವಿಡಿಯೋದಲ್ಲಿ ವಾಜಪೇಯಿ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಆ ಸಮಯದಲ್ಲಿ ನರೇಂದ್ರ ಮೋದಿಯವರು ಅಟಲ್ ಜೀ ಗಮನಕ್ಕೆ ಬರುತ್ತಾರೆ. ಅಟಲ್ ಜೀ, ಮೋದಿ ಅವರನ್ನು ಸಮೀಪಿಸಕ್ಕೆ ಬರುವಂತೆ ಸೂಚಿಸುತ್ತಾರೆ. ನರೇಂದ್ರ ಮೋದಿ ಅವರು ವಾಜಪೇಯಿಯವರ ಬಳಿಗೆ ಓಡಿ ಬರುತ್ತಾರೆ. ಆ ಸಮಯದಲ್ಲಿ ಅಟಲ್ ಜೀ ಏನು ಮಾಡಿದ್ರು ಗೊತ್ತಾ!
ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ 24 ಗಂಟೆಗಳಿಂದ ಅವರ ದೇಹ ಚಿಕಿತ್ಸೆಗೆ ಸ್ಪಂಧಿಸುತ್ತಿಲ್ಲ ಎಂದು ಏಮ್ಸ್ ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿವೆ. 93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಒಂಬತ್ತು ವಾರಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿ ಅವರ ಆರೋಗ್ಯ ಕಳೆದ 24 ಗಂಟೆಯಿಂದ ಕ್ಷೀಣಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ವಾಜಪೇಯಿ ಆರೋಗ್ಯ ಬಿಗಡಾಯಿಸಿರುವ ಹಿನ್ನಲೆಯಲ್ಲಿ ರಾಜಕೀಯ ಪ್ರಮುಖ ನಾಯಕರು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ವಾಜಪೇಯಿ ಆರೋಗ್ಯ ಹದಗೆಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ಏಮ್ಸ್ಗೆ ಭೇಟಿ ನೀಡಿ ವಾಜಪೇಯಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆ ಸುಮಾರು ಒಂದು ಗಂಟೆ ಕಾಲ ಚರ್ಚಿಸಿದರು. ಅಲ್ಲದೆ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವರಾದ ರಾಜನಾಥ್ ಸಿಂಗ್, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಸಚಿವರಾದ ಪಿಯೂಷ್ ಗೋಯಲ್, ಹರ್ಷವರ್ಧನ್, ಸ್ಮೃತಿ ಇರಾನಿ, ಸುರೇಶ್ ಪ್ರಭು ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಏಮ್ಸ್ಗೆ ಭೇಟಿ ನೀಡಿದ್ದರು.
ಇಂತಹ ಸಮಯದಲ್ಲಿ, ಅಟಲ್ ಬಿಹಾರಿ ವಾಜಪೇಯಿಗೆ ಸಂಬಂಧಿಸಿದ ಹೇಳಿಕೆಗಳು ಮತ್ತು ಭಾಷಣಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜನರು ತಮ್ಮ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪರೂಪದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ, ಇಂತಹ ವಿಡಿಯೋಗಳ ಪೈಕಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇದು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಅಪರೂಪದ ವಿಡಿಯೋ. ಈ ವಿಡಿಯೋದಲ್ಲಿ ವಾಜಪೇಯಿ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಆ ಸಮಯದಲ್ಲಿ ನರೇಂದ್ರ ಮೋದಿಯವರು ಅಟಲ್ ಜೀ ಗಮನಕ್ಕೆ ಬರುತ್ತಾರೆ. ಅಟಲ್ ಜೀ, ಮೋದಿ ಅವರನ್ನು ಸಮೀಪಿಸಕ್ಕೆ ಬರುವಂತೆ ಸೂಚಿಸುತ್ತಾರೆ. ನರೇಂದ್ರ ಮೋದಿ ಅವರು ವಾಜಪೇಯಿಯವರ ಬಳಿಗೆ ಓಡಿ ಬರುತ್ತಾರೆ. ಆ ಸಮಯದಲ್ಲಿ ಅಟಲ್ ಜೀ ಏನು ಮಾಡಿದ್ರು ಗೊತ್ತಾ...! ಅದನ್ನ ನೀವೇ ನೋಡಿ