ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಹಾವು ಮತ್ತು ಇಲಿ ಸೆಣೆಸಾಟದ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಅನ್ನು ಇಂಡಿಯನ್ ಫಾರೆಸ್ಟ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಹಂಚಿಕೊಂಡು ಬರೆದುಕೊಂಡಿರುವ ಅವರು, "ಇನ್ಮುಂದೆ ಈ ಹಾವು ಎಂದಿಗೂ ಕೂಡ ಇಲಿಯ ಮರಿಯ ಅಕ್ಕ-ಪಕ್ಕ ಕೂಡ ಕಾಣಿಸುವುದಿಲ್ಲ ಎಂದಿದ್ದಾರೆ. ಜೊತೆಗೆ ತಾಯಿ ತನ್ನ ಮಕ್ಕಳಿಗಾಗಿ ಯಾವ ಹಂತಕ್ಕೂ ಹೋಗಲು ಸಿದ್ಧವಾಗಿರುತ್ತಾಳೆ, ಈ ಭೂಮಿಯ ಮೇಲೆ 'ತಾಯ್ತನದಗಿಂತ ದೊಡ್ಡ ಆಯುಧ ಬೇರೊಂದಿಲ್ಲ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಈ ವೈರಲ್ ವಿಡಿಯೋದಲ್ಲಿ ಹಾವೊಂದು ಇಲಿ ಮರಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ವೇಗವಾಗಿ ಧಾವಿಸುತ್ತಿದೆ. ಇನ್ನೊಂದೆಡೆ ಇಲಿಮರಿಯ ತಾಯಿ ತನ್ನ ಮಗುವನ್ನು ಕಾಪಾಡಲು ಹಾವಿನ ಹಿಂದೆ ಧಾವಿಸಿ ಅದರ ಜೊತೆಗೆ ಸೆಣೆಸಾಟ ನಡೆಸುತ್ತಿದ್ದಾಳೆ. ಅಷ್ಟೇ ಅಲ್ಲ ಮಗುವನ್ನು ಕಾಪಾಡಲು ಆಕೆ ತನ್ನ  ಪ್ರಾಣವನ್ನು ಕೂಡ ಲೆಕ್ಕಿಸದೆ ಹಾವಿನ ಬಾಲ ಹಿಡಿದು ಎಳೆದಾಡುತ್ತಿದ್ದಾಳೆ. ಕೊನೆಗೆ ಅಂದುಕೊಂಡಂತೆಯೇ ನಡೆದಿದೆ, ಹೆಣ್ಣು ಇಲಿಯ ಧೈರ್ಯದ ಮುಂದೆ ಹಾವು ಸೋಲನ್ನೋಪ್ಪಿಕೊಂಡು ಅಲ್ಲಿಂದ ಕಾಲ್ಕಿತ್ತಿದೆ. ಅದೂ ಕೂಡ ಇಲಿಮರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ. 'ತಾಯಿಯ ಎದುರು ಆಕೆಯ ಮಗುವನ್ನು ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂಬುದನ್ನು ಈ ವಿಡಿಯೋ ಮತ್ತೊಮ್ಮೆ ಸಿದ್ಧಪಡಿಸಿದೆ.



ಈ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಭಾರಿ ವೈರಲ್ ಆಗಿದೆ. ಇದುವರೆಗೆ ಈ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸಾವಿರಕ್ಕೂ ಲೈಕ್ಸ್ ಹಾಗೂ 200 ಕ್ಕೂ ಅಧಿಕ ಕಾಮೆಂಟ್ ಗಳು ಬಂದಿವೆ.