ದೇಶದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ ಅವರಿಗೆ ವಿಶ್ವಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ.  ನಮ್ಮ ದೇಶದಲ್ಲಿ ಲಕ್ಷಾಂತರ ಯುವಕರು ರತನ್ ಟಾಟಾ ಅವರು ತಮ್ಮ ಐಡಲ್ ಎಂದು ಹೇಳುತ್ತಾರೆ. ಸಿಂಪಲ್ ಲೈಫ್ ಸ್ಟೈಲ್ ಹೊಂದಿರುವ ರತನ್ ಟಾಟಾ ಅವರದ್ದು ಕೂಡ ಒಂದು ಲವ್ ಸ್ಟೋರಿ ಇದೆ.


COMMERCIAL BREAK
SCROLL TO CONTINUE READING

ಹೌದು, ನೀವು ಕೇಳುತ್ತಿರುವುದು ನಿಜ, ಈ ಕುರಿತು ಖುದ್ದು ರತನ್ ಟಾಟಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪದವಿ ಶಿಕ್ಷಣದ ಬಳಿಕ ಲಾಸ್ ಎಂಜಲಿಸ್ ನಲ್ಲಿ ಕೆಲಸ ಮಾಡುವಾಗ ಅವರ ಜೊತೆ ಈ ಸಿಹಿ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ.


ಅಷ್ಟೇ ಅಲ್ಲ ಅವರ ಈ ಲವ್ ಸ್ಟೋರಿ ಮದುವೆಯವರೆಗೂ ಬಂದು ತಲುಪಿತ್ತು ಎಂದಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ರತನ್ ಟಾಟಾ ಇದರ ಜೊತೆಗೆ ತಮ್ಮ ಜೀವನ, ಪೋಷಕರ ಡಿವೋರ್ಸ್, ಅಜ್ಜ-ಅಜ್ಜಿಯರ ಸಲಹೆ, ವ್ಯಾಸಂಗ ಹಾಗೂ ಪ್ರೀತಿ ಇತ್ಯಾದಿಗಳ ಬಗ್ಗೆಯೂ ಕೂಡ ಮಾತನಾಡಿದ್ದಾರೆ.


ಖ್ಯಾತ ಫೇಸ್ ಬುಕ್ ಪುಟ 'ಹ್ಯೂಮನ್ಸ್ ಆಫ್ ಬಾಂಬೆ'ಗೆ ನೀಡಿರುವ ಸಂದರ್ಶನದಲ್ಲಿ ರತನ್ ಟಾಟಾ ಈ ಎಲ್ಲದರ ಕುರಿತು ಮಾತನಾಡಿದ್ದಾರೆ. ಈ ಸಂದರ್ಶನ ಒಟ್ಟು ಮೂರು ಭಾಗಗಳಲ್ಲಿ ಬಿತ್ತರಗೊಂಡಿದ್ದು ಇದೀಗ ಭಾರಿ ವೈರಲ್ ಆಗಿದೆ.


ಅಜ್ಜಿಯನ್ನು ನೆನೆಪಿಸಿದ ಟಾಟಾ
ತಾವು 10 ವರ್ಷ ವಯಸ್ಸಿನಲ್ಲಿರುವಾಗ ತಮ್ಮ ಪೋಷಕರ ಡೈವೋರ್ಸ್ ಆಗಿತ್ತು ಎಂದ ಟಾಟಾ, ತಮ್ಮ ಅಜ್ಜಿ ತಮಗೆ ಒಳ್ಳೆಯ ಮಾರ್ಗದರ್ಶನ ನೀಡಿದರು ಎಂದಿದ್ದಾರೆ. ತಮ್ಮ ಹಾಗೂ ತಮ್ಮ ತಂದೆಯವರ ವೈಚಾರಿಕತೆಯಲ್ಲಿ ಭಾರಿ ಅಂತರ ಇತ್ತು ಎಂದು ಟಾಟಾ ಹೇಳಿದ್ದಾರೆ.


ಮೊದಲ ಪ್ರೀತಿ
ರತನ್ ಟಾಟಾ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕಾರ್ನಲ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದು ಲಾಸ್ ಎಂಜಲಿಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪ್ರೀತಿಯಾಯ್ತು ಎಂದು ಹೇಳಿದ್ದಾರೆ. ಆ ಯುವತಿಯನ್ನು ತಾನು ತುಂಬಾ ಪ್ರೀತಿಸುತ್ತಿದ್ದೆ ಮತ್ತು ತಮ್ಮ ಪ್ರೀತಿ ಮದುವೆಯವರೆಗೂ ಬಂದು ತಲುಪಿತ್ತು ಎಂದು ಟಾಟಾ ಹೇಳಿದ್ದಾರೆ. ಆದರೆ, ಅಜ್ಜಿಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ತಮಗೆ ಭಾರತಕ್ಕೆ ಮರಳಬೇಕಾಗಿ ಬಂತು ಎಂದಿದ್ದಾರೆ. ಆದರೆ, ಈ ಸಂದರ್ಭದಲ್ಲಿ ತಾವು ಪ್ರೀತಿಸಿದ ಯುವತಿ ಕೂಡ ತಮ್ಮ ಜೊತೆಗೆ ಭಾರತಕ್ಕೆ ಬರಬಹುದು ಎಂಬುದು ಅವರ ಅನಿಸಿಕೆಯಾಗಿತ್ತು. ಆದರೆ, 1962 ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಬಳಿಕ ರತನ್ ಟಾಟಾ ಅವರ ಪೋಷಕರು ಯುವತಿಯ ಭಾರತ ಬರುವಿಕೆಗೆ ವಿರೋಧ ವ್ಯಕ್ತಪಡಿಸಿದರು ಎಂದಿದ್ದಾರೆ. ಹೀಗಾಗಿ ಅವರ ಈ ಸಂಬಂಧ ಮುರಿದುಬಿತ್ತು ಎಂದು ಟಾಟಾ ಹೇಳಿದ್ದಾರೆ.