ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಆರ್ಥಿಕ ಹಿಂಜರಿತ ದೊಡ್ಡ ಸವಾಲಾಗಿದೆ. ಅನೇಕ ದೇಶಗಳು ಇದರ ಕೆಟ್ಟ ಪರಿಣಾಮವನ್ನು ಎದುರಿಸುತ್ತಿವೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಅರ್ಥಿಕ ಹಿಂಜರಿತ ಹೆಚ್ಚು ಪರಿಣಾಮ ಬೀರಿರುವುದು ಆಟೋಮೊಬೈಲ್ (Automobile) ವಲಯದಲ್ಲಿ. ಇದನ್ನು ಸುಧಾರಿಸಲು ಭಾರತ ಸರ್ಕಾರ ನಿರಂತರವಾಗಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಏತನ್ಮಧ್ಯೆ, ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಸರ್ಕಾರದ ಪರವಾಗಿ ದೊಡ್ಡ ಹೇಳಿಕೆ ನೀಡಿದ್ದು, ಇದು ಕೇಂದ್ರ ಸರ್ಕಾರಕ್ಕೆ ಸ್ವಲ್ಪ ಸಮಾಧಾನ ನೀಡುತ್ತದೆ.


COMMERCIAL BREAK
SCROLL TO CONTINUE READING

ಬುಧವಾರ ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರತನ್ ಟಾಟಾ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಇದುವರೆಗಿನ ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುಧಾರಣೆಗಾಗಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅವರ ಸರ್ಕಾರವು ದೇಶದ ಬಗ್ಗೆ ಅನೇಕ ದೃಷ್ಟಿಕೋನಗಳನ್ನು ಹೊಂದಿದೆ ಎಂದು ಅವರು ಹೇಳಿದರು.



ಗುಜರಾತ್‌ನ ರಾಜಧಾನಿ ಗಾಂಧಿ ನಗರದಲ್ಲಿರುವ ಭಾರತೀಯ ಕೌಶಲ್ಯ ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ರತನ್ ಟಾಟಾ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರತನ್ ಟಾಟಾ, ನಮ್ಮ ಪ್ರಧಾನಿ ಮತ್ತು ಗೃಹ ಸಚಿವರು ಅನೇಕ ಮುಂದಾಲೋಚನೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಅದು ಯಾರಿಗೂ ಕಾರ್ಯಗತಗೊಳಿಸಲು ಸುಲಭವಲ್ಲ ಎಂದು ಹೇಳಿದರು.


ಐಐಎಸ್ ಪ್ರಾರಂಭಿಸುವಲ್ಲಿ ಟಾಟಾ ಎಜುಕೇಶನ್ ಟ್ರಸ್ಟ್ ಸರ್ಕಾರದೊಂದಿಗಿದೆ ಕೈ ಜೋಡಿಸಿದೆ. ಈ ಬಗ್ಗೆ ಮಾತನಾಡಿದ ರತನ್ ಟಾಟಾ, ನಾನು ಇಂದು 20 ವರ್ಷ ವಯಸ್ಸಿನವನಾಗಿದ್ದರೆ, ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಕೆಲಸ ಮಾಡಲು ಮತ್ತು ಅದಕ್ಕೆ ಕೊಡುಗೆ ನೀಡಲು ನನಗೆ ಸಾಧ್ಯವಾಗುತ್ತಿತ್ತು ಎಂದು ಅವರು ಹೇಳಿದರು. ಇದೇ ವೇಳೆ ಸರ್ಕಾರವನ್ನು ಶ್ಲಾಘಿಸುವಾಗ,  ಯಾರು ಹೇಳಲಿ ಅಥವಾ ಬಿಡಲಿ, ನೀವು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ನಾವು ಖಂಡಿತವಾಗಿ ಹೇಳಲು ಬಯಸುತ್ತೇವೆ ಎಂದರು.