Ratan Tata: ಕೋಟ್ಯಾಧಿಪತಿ ಆದ್ರೂ ರತನ್ ಟಾಟಾ ಯಾಕೆ ಮದುವೆಯಾಗಿಲ್ಲ..ಇಷ್ಟ ಪಟ್ಟ ಹುಡುಗಿಯಿಂದ ದೂರವಾಗಿದ್ದೇಕೆ..?
Ratana Tata Life Story : ಭಾತರದ ಶ್ರೀಮಂತ ಉದ್ಯಮಿ ರತನ್ ಟಾಟಾ ಸರಳ ವ್ಯಕ್ತಿತ್ವದ ಮನುಷ್ಯ. ಇವರ ಈ ಗುಣಕ್ಕೆ ಎಲ್ಲರೂ ಇವರನ್ನು ಬಹಳ ಇಷ್ಟ ಪಡುತ್ತಾರೆ. ಇದೀಗ ರತನ್ ಟಾಟಾ ಅವರು ಅವಿವಾಹಿತರಾಗಿ ಉಳಿದಿರುವ ಕುರಿತು ಮಾಹಿತಿ ಲಭಿಸಿದೆ.
Ratan Tata : ಕೋಟ್ಯಾಂತರ ಭಾರತೀಯರಿಗೆ ರೋಲ್ ಮಾಡೆಲ್ ಆಗಿರುವ ರತನ್ ಟಾಟಾ ಅವರು ಟಾಟಾ ಗ್ರೂಪ್ ನ ಅದ್ಬುತ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಹಾಗಾದರೆ ಬಿಲಿಯನೇರ್ ಆದ ಟಾಟಾ ಅವರಿಗೆ ಯಾಕೆ ಮದುವೆಯಾಗಿಲ್ಲ? ಅವರಿಗೆ ಪ್ರೀತಿಯಾಗಿಲ್ವಾ? ರತನ್ ಟಾಟಾ ಅವರ ಸಾಧನೆ ಬಿಟ್ಟು ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ರತನ್ ಟಾಟಾ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಜೀವನ ಸಂತೋಷಕರವಾಗಿತ್ತು ಎಂದಿದ್ದರು. ಅವರ ಪೋಷಕರು ವಿಚ್ಚೇಧನ ಪಡೆದಾಗ ಟಾಟಾ ಸಾಕಷ್ಟು ನೋವನ್ನು ಅನುಭವಿಸಿದ್ದರಂತೆ. ರತನ್ ಟಾಟಾ ಅವರು ಏಂಜಲೀಸ್ ನಲ್ಲಿ ಇದ್ದಾಗ ಪ್ರೀತಿಯಲ್ಲಿದ್ದರಂತೆ. ಆದರೆ ಅಜ್ಜಿಯ ಅರೋಗ್ಯ ಸಮಸ್ಯೆಯ ಕಾರಣ ಅವರು ಭಾರತಕ್ಕೆ ಹಿಂದಿರುಗ ಬೇಕಾಗಿತ್ತು.
ಇದನ್ನೂ ಓದಿ-ದೆಹಲಿ-ಎನ್‌ಸಿಆರ್, ಜಮ್ಮು-ಕಾಶ್ಮೀರದಲ್ಲಿ ಭೂಕಂಪ..! 5.8 ತೀವ್ರತೆ ದಾಖಲು
ಅವರು ಪ್ರೀತಿಸಿದ ಹುಡುಗಿ ಅವರನ್ನು ಭಾರತದಲ್ಲಿ ಬೇಟಿ ಮಾಡಲು ಸಿದ್ದರಾಗಿದ್ದರಂತೆ ಆದರೆ ಆಗ ಭಾರತ -ಚೀನಾ ಯುದ್ಧ ಪ್ರಾರಂಭಾಗಿದ್ದರಿಂದ ಅವರ ಪೋಷಕರು ಅವಳಿಗೆ ಅವಕಾಶ ನೀಡಲಿಲ್ಲ. ಇದರಿಂದ ರತನ್ ಟಾಟಾ ಅವರು ತಾವು ಮನಸಾರೆ ಪ್ರೀತಿಸಿದ ಹುಡುಗಿಯಿಂದ ದೂರವಾಗಿದ್ದಾರೆ.
ನನಗೆ ಜೀವನ ಸಂಗಾತಿ ಇಲ್ಲವೆಂದು ನಾನು ಬೇಸರದಲ್ಲಿಲ್ಲ. "ನಾನು ನಿರಂತರವಾಗಿ ಕೆಲಸದಲ್ಲಿ ತೊಡಗಿರುತ್ತಿದ್ದೆ..ಪ್ರಯಾಣಿಸುತ್ತಿದ್ದೆ. ನನಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿಲ್ಲ. ಆದರೆ ನಾನು ಹಿಂತಿರುಗಿ ನೋಡಿದಾಗ ಯಾವುದಕ್ಕು ಬೇಸರವಾಗುವುದಿಲ್ಲ" ಎಂದು ರತನ್ ಟಾಟಾ ಹೇಳಿದ್ದಾರೆ.
ಇದನ್ನೂ ಓದಿ-ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.