ನವದೆಹಲಿ: ದೆಹಲಿ ಪೊಲೀಸ್ ಮತ್ತು ದೆಹಲಿ ಅಬಕಾರಿ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದೆಹಲಿಯ ಛತ್ತರ್ಪುರ್ ಎಂಬಲ್ಲಿ ಶನಿವಾರ ರಾತ್ರಿ ಅಕ್ರಮವಾಗಿ ರೇವ್ ಪಾರ್ಟಿ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 15 ಮಂದಿಯನ್ನು ಬಂಧಿಸಲಾಗಿದೆ. 


COMMERCIAL BREAK
SCROLL TO CONTINUE READING

ಛತ್ತರ್ಪುರದ ಎಜೆನ್ಕ್ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಉತ್ತರಪ್ರದೇಶದ ಗುರುಗ್ರಾಮ, ಫರೀದಾಬಾದ್, ಹರಿಯಾಣ ಮತ್ತು ನೋಯ್ಡಾ ಮೂಲದ ಅಪ್ರಾಪ್ತ ಹುಡುಗರೂ ಸಹ ಭಾಗವಹಿಸಿದ್ದರು. ಇವರಿಂದ ಅಕ್ರಮ ವಿದೇಶಿ ಮದ್ಯ, ಕೊಕೇನ್‌ ಮತ್ತು ಡ್ರಗ್ಸ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುದ್ದಿ ಸಂಸ್ಥೆಯ ಪಿಟಿಐ ಪ್ರಕಾರ, ಇಂಗ್ಲಿಷ್ ಮ್ಯೂಸಿಕ್ ಬ್ಯಾಂಡ್ ಆದ 'ರೆಡ್' ರೇವ್ ಪಾರ್ಟಿಯಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ತಲಾ 2,500ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. "ನಾವು 300 ಬಾಟಲಿಗಳ ಮದ್ಯ ಮತ್ತು 350 ಬೀರ್ ಬಾಟಲಿಗಳನ್ನು ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ವಶಪಡಿಸಿಕೊಂಡಿದ್ದೇವೆ" ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.