ಆರ್‌ಬಿಐನಿಂದ ರೆಪೋ ದರ 0.25% ಕಡಿತ
ಆರ್‌ಬಿಐನಿಂದ ರೆಪೋ ದರ 0.25% ಇಳಿಕೆಯಾದ ನಂತರ ಶೇ. 6ರಷ್ಟಿದ್ದ ರೆಪೋ ದರ ಈಗ ಶೇ. 5.75ಕ್ಕೆ ತಲುಪಿದೆ.
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ತನ್ನ ಸಾಲ ನೀತಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ, ಆರ್‌ಬಿಐ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರದಲ್ಲಿ ಶೇ.0.25 ರಷ್ಟು ಕಡಿತವನ್ನು ಘೋಷಿಸಿತು. ಸತತ ಮೂರನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದೆ. ಆರ್‌ಬಿಐನಿಂದ ರೆಪೋ ದರ 0.25% ಇಳಿಕೆಯಾದ ನಂತರ ಶೇ. 6ರಷ್ಟಿದ್ದ ರೆಪೋ ದರ ಈಗ ಶೇ. 5.75ಕ್ಕೆ ತಲುಪಿದೆ.
ಈಗ ಆರ್‌ಬಿಐ ದೇಶದ ಬ್ಯಾಂಕುಗಳಿಗೆ 5.75% ದರದಲ್ಲಿ ಸಾಲವನ್ನು ಒದಗಿಸುತ್ತದೆ. ರೆಪೋ ದರವನ್ನು ಕಡಿಮೆ ಮಾಡಿರುವುದರಿಂದ ಇಎಂಐ ಮತ್ತು ಬಡ್ಡಿದರಗಳ ಮೇಲೆ ಪರಿಣಾಮ ಬೀರುತ್ತದೆ.
ಶಕ್ತಿದಾಸ್ ಅವರು ಆರ್‌ಬಿಐ ಗವರ್ನರ್ ಆದ ನಂತರ ಮೂರನೇ ಬಾರಿಗೆ ರೆಪೋ ದರ ಕಡಿತವಾಗಿದೆ. ಹಿಂದಿನ, ಫೆಬ್ರವರಿ ಮತ್ತು ಏಪ್ರಿಲ್ ನಲ್ಲೂ ಕೂಡ, ರಿಸರ್ವ್ ಬ್ಯಾಂಕ್ ರೆಪೋ ದರವನ್ನು 0.25% ಕಡಿತಗೊಳಿಸಿತು. ಹೀಗಾಗಿ ಒಟ್ಟು 0.75 ರಷ್ಟು ಕಡಿತಗೊಳಿಸಲಾಗಿದೆ.
ರೆಪೋ ದರ ಇಳಿಕೆಯಿಂದ ಗೃಹ ಸಾಲದ ಬಡ್ಡಿ ಕಡಿತ:
ಗೃಹ ಮತ್ತು ವಾಹನ ಸಾಲಗಳು ಆರ್‌ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆರ್‌ಬಿಐ ರೆಪೋ ದರ ಕಡಿಮೆಯಾದಾಗ ಬ್ಯಾಂಕುಗಳು ಸಾಲಗಾರರಿಗೆ ಕಡಿಮೆ ಬಡ್ಡಿದರ ವಿಧಿಸುತ್ತವೆ. ಹೀಗಾಗಿ ಬ್ಯಾಂಕುಗಳು ಮನೆ ಹಾಗೂ ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆಯಿದ್ದು, ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಇಎಂಐ ಕೂಡಾ ಕಡಿಮೆಯಾಗಲಿದೆ.
ರೆಪೋ ದರ ಎಂದರೇನು?
ಆರ್‌ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.