2,000 ರೂ. ನೋಟು ಕೂಡ ಬಂದ್ ಆಗುತ್ತಾ? ಸರ್ಕಾರ, ಆರ್ಬಿಐನಿಂದ ಮಹತ್ವದ ನಿರ್ಧಾರ!
ನವೆಂಬರ್ 2016ರಲ್ಲಿ ಕೇಂದ್ರ ಸರ್ಕಾರ ಹಳೆಯ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಸರ್ಕಾರ 2,000 ರೂ.ನ ಹೊಸ ನೋಟನ್ನು ಜಾರಿಗೆ ತರಲಾಯಿತು.
ನವದೆಹಲಿ: ಎರಡು ವರ್ಷಗಳ ಹಿಂದೆ ನೋಟು ನಿಷೇಧದ ನಂತರ ಜಾರಿಗೆ ಬಂದ 2,000 ರೂ. ಮುಖಬೆಲೆಯ ನೋಟು ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿರಳವಾಗಿ ಕಾಣಸಿಗುತ್ತಿದೆ. ಈ ಕುರಿತು ಈಗ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಪ್ರಕಾರ, 2000 ರೂಪಾಯಿಗಳ ಕರೆನ್ಸಿ ನೋಟುಗಳ ಮುದ್ರಣವು ಕನಿಷ್ಠ ಮಟ್ಟವನ್ನು ತಲುಪಿದೆ. ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿ ಗುರುವಾರ ಈ ಮಾಹಿತಿಯನ್ನು ನೀಡಿದರು.
2016ರಲ್ಲಿ ಜಾರಿಗೆ:
ನವೆಂಬರ್ 2016ರಲ್ಲಿ ನೋಟು ನಿಷೇಧದ ನಂತರ ಸರ್ಕಾರ 2,000 ರೂ.ನ ಹೊಸ ನೋಟನ್ನು ಜಾರಿಗೆ ತರಲಾಯಿತು. ಸರ್ಕಾರ ನವೆಂಬರ್ 8, 2016 ರಂದು ಕೇಂದ್ರ ಸರ್ಕಾರ ಹಳೆಯ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತು. ಅದರ ನಂತರ, ರಿಸರ್ವ್ ಬ್ಯಾಂಕ್ 500 ರೂ. ಮುಖಬೆಲೆಯ ಹೊಸ ನೋಟಿನ ಜೊತೆಗೆ 2,000 ರೂ. ಮುಖಬೆಲೆಯ ನೋಟನ್ನು ಜಾರಿಗೆ ತಂದಿತು.
2016ರಲ್ಲಿ ನಿಷೇಧವಾದ ನೋಟು(ಫೈಲ್ ಫೋಟೋ)
ರಿಸರ್ವ್ ಬ್ಯಾಂಕ್ ಮತ್ತು ಸರಕಾರ ನಿಯತಕಾಲಿಕವಾಗಿ ಕರೆನ್ಸಿಯ ಮುದ್ರಣವನ್ನು ನಿರ್ಧರಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2,000 ರೂ. ನೋಟುಗಳನ್ನು ನೀಡಿದಾಗ ಮಾತ್ರ ಕ್ರಮೇಣ ಅದರ ಮುದ್ರಣವನ್ನು ಕಡಿಮೆಗೊಳಿಸಲಾಗುವುದು ಎಂದು ತೀರ್ಮಾನಿಸಲಾಯಿತು. ವ್ಯವಸ್ಥೆಯಲ್ಲಿ ತ್ವರಿತ ಹಣವನ್ನು ಒದಗಿಸುವುದು 2,000 ರೂ. ನೀಡಿದ ಏಕೈಕ ಉದ್ದೇಶವಾಗಿದೆ. 2,000 ರೂ. ನೋಟುಗಳ ಮುದ್ರಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅಂಕಿಅಂಶಗಳು ಏನು ಹೇಳುತ್ತವೆ?
ರಿಸರ್ವ್ ಬ್ಯಾಂಕ್ನ ಅಂಕಿ ಅಂಶಗಳ ಪ್ರಕಾರ, 2017 ರ ಮಾರ್ಚ್ ಅಂತ್ಯದ ವೇಳೆಗೆ, 328.5 ದಶಲಕ್ಷ 2,000 ರೂ. ನೋಟುಗಳಿದ್ದವು. ಮಾರ್ಚ್ 31, 2018 ರ ವೇಳೆಗೆ, ಈ ನೋಟುಗಳ ಸಂಖ್ಯೆಯು ಸ್ವಲ್ಪಮಟ್ಟಿಗೆ 336.3 ಮಿಲಿಯನ್ ಗೆ ಹೆಚ್ಚಿದೆ. ಮಾರ್ಚ್ 2018 ರ ಅಂತ್ಯದ ತನಕ ಒಟ್ಟು 18,037 ಬಿಲಿಯನ್ ರೂಪಾಯಿಗಳ ಚಲಾವಣೆಯಲ್ಲಿತ್ತು. ಅವುಗಳಲ್ಲಿ, 2000 ನೋಟುಗಳ ಪಾಲು ಶೇ 37.3 ಕ್ಕೆ ಇಳಿದಿದೆ.