ಮುಂಬಯಿ: ಸರ್ಕಾರದೊಂದಿಗೆ ಆರ್ಬಿಐ ಗರ್ವನರ್ ಉರ್ಜಿತ್ ಪಟೇಲ್ ಅವರ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈಗ ಅವರು ರಾಜಿನಾಮೆ ನೀಡುವ ವಿಚಾರವಾಗಿ ಬುಧುವಾರದಂದು ಹಲವು ಖಾಸಗಿ ಚಾನೆಲ್ ಗಳು ವರದಿ ಮಾಡಿವೆ. ಆದರೆ ಈ ವಿಚಾರವಾಗಿ ಆರ್ಬಿಐ ಮತ್ತು ಹಣಕಾಸು ಸಚಿವಾಲಯ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಸುದ್ದಿಮೂಲಗಳ ಪ್ರಕಾರ ಭಾರತೀಯ ರೂಪಾಯಿ ಮೌಲ್ಯದಲ್ಲಿ ನಿರಂತರ ಕುಸಿತ ಕಂಡು ಬಂದಿದೆ. ಸಧ್ಯ ರೂಪಾಯಿ ಮೌಲ್ಯ ಡಾಲರ್ ಎದುರು 74.04 ತಲುಪಿದ್ದು. ಇದಕ್ಕೆ ಕಡಿವಾಣ ಹಾಕುವಲ್ಲಿ ಉರ್ಜಿತ್ ಪಟೇಲ್ ವಿಫಲವಾದ ಹಿನ್ನಲೆಯಲ್ಲಿ ಈಗ ಅವರು ರಾಜಿನಾಮೆ ನಿಡುವತ್ತ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಇತ್ತೀಚಿಗೆ ಆರ್ಬಿಐ ಮತ್ತು ಸರ್ಕಾರದ ನಡುವೆ ಬಿಕ್ಕಟ್ಟು ಉದ್ಬವಿಸಿತ್ತು. ಅದರಲ್ಲೂ ಪ್ರಮುಖವಾಗಿ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಅವರು ಬ್ಯಾಂಕಿನ ಸ್ವಾಯತ್ತೆಯಲ್ಲಿ ಕೇಂದ್ರ ಸರ್ಕಾರವು ಹಸ್ತಕ್ಷೇಪ ಮಾಡುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.ಇನ್ನೊಂದೆಡೆಗೆ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ವಿತ್ತೀಯ ಕೊರತೆ ನಿವಾರಿಸಲು ಆರ್ಬಿಐ ವಿಫಲವಾಗಿರುವ ಬಗ್ಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಆರ್ಬಿಐ ನಡುವೆ ಬಿಕ್ಕಟ್ಟು ಹೆಚ್ಚಿಸಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದಾರೆ.