ಮುಂಬೈ: ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆಯನ್ನೂ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿರ್ಧರಿಸಿದೆ. ರೆಪೋ ದರಗಳನ್ನು ಶೇಕಡಾ 6.5ರ ದರದಲ್ಲಿ ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 6.25ರ ದರದಲ್ಲಿಯೇ ಮುಂದುವರೆಸಲು ಆರ್​ಬಿಐ ತೀರ್ಮಾನಿಸಿದೆ.


COMMERCIAL BREAK
SCROLL TO CONTINUE READING

ಇದಲ್ಲದೆ,  CRR ವಿತ್ತೀಯ ನೀತಿಯಲ್ಲಿ ಶೇ. 4 ರಷ್ಟನ್ನು ಸ್ಥಿರವಾಗಿ ಇರಿಸಲಾಗಿದೆ.  MPC 6 ಸದಸ್ಯರಲ್ಲಿ ಐವರು  ಬಡ್ಡಿಯನ್ನು ಹೆಚ್ಚಿಸದೆ ಇರುವಂತೆ ಮತ ಚಲಾಯಿಸಿದ್ದಾರೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದ ಕಾರಣ ಮಾಸಿಕ ಕಂತುಗಳಲ್ಲಿ (EMI) ತೀರಿಸುವ ಸಾಲಗಳ ಬಡ್ಡಿಯು ಎಂದಿನ ಹಾಗೇ ಚಾಲ್ತಿಯಲ್ಲಿರಲಿದೆ.


ರೆಪೋ ದರ ಎಂದರೇನು?
ಆರ್​ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.