ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರಕ್ಕೆ 40,000 ಕೋಟಿ ರೂ.ಗಳ ಆರ್ಥಿಕ ನೆರವು ಒದಗಿಸಲು ಸಿದ್ಧವಿದೆ ಎಂದು ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಈ ವರದಿಯ ಪ್ರಕಾರ ಆರ್ಬಿಐ ಸರಕಾರಕ್ಕೆ 4.32 ಶತಕೋಟಿ ಡಾಲರ್'ಗಳಿಂದ 5.8 ಶತಕೋಟಿ ಡಾಲರ್'ಗಳಷ್ಟು (ಸುಮಾರು 400 ಶತಕೋಟಿ ಡಾಲರ್) ಡೆವಿಡೆಂಟ್ ಅನ್ನು ಮಾರ್ಚ್ ವೇಳೆಗೆ ನೀಡಲಿದೆ ಎನ್ನಲಾಗಿದೆ. ಬಹಳ ದಿನಗಳಿಂದ ಸರ್ಕಾರ ಆರ್ಬಿಐ ಬಳಿ ಡೆವಿಡೆಂಟ್ ನೀಡುವಂತೆ ಬೇಡಿಕೆ ಇಟ್ಟಿತ್ತು. ಇದೀಗ ಈ ಹಣವು ಸರ್ಕಾರದ ಹಣಕಾಸಿನ ಕೊರತೆಯ ಅಂತರವನ್ನು ತಗ್ಗಿಸಲು ಸಹಾಯವಾಗಲಿದೆ. ತೆರಿಗೆ ಸಂಗ್ರಹಣೆಯಲ್ಲಿ ನಿರಂತರ ಇಳಿಕೆಯಾದ್ದರಿಂದ ಸರ್ಕಾರ ಡೆವಿಡೆಂಟ್ ನೀಡುವಂತೆ ಕೋರಿದೆ ಎನ್ನಲಾಗಿದೆ. 


ಕಳೆದ ವರ್ಷ ಡಿಸೆಂಬರ್ 10 ರಂದು ಆರ್ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ, ಆರ್ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರ ಸರ್ಕಾರ ನೇಮಕ ನೇಮಕ ಮಾಡಿದೆ. ಹಲವು ವಿಷಯಗಳಲ್ಲಿ ಸರ್ಕಾರ ಮತ್ತು ಆರ್ಬಿಐ ನಡುವೆ ಭಿನ್ನಾಭಿಪ್ರಾಯ ಮೂಡಿರುವ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಬಹಿರಂಗಗೊಳಿಸಿದ ಬೆನ್ನಲೇ ಊರ್ಜಿತ್ ಪಟೇಲ್ ಅವರು ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.