ನವದೆಹಲಿ: ಡಿಜಿಟಲ್ ಬಿಲ್ ಪಾವತಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ RBI ಇದೀಗ UPI ಮೂಲಕ ನಿಮ್ಮ ರಿಕರಿಂಗ್ ಬಿಲ್ ಪಾವತಿಸುವ ಸೌಲಭ್ಯಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಒಂದುವೇಳೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಎಲೆಕ್ಟ್ರಿಸಿಟಿ ಬಿಲ್ ಪಾವತಿಯನ್ನು ನಿಗದಿತ ದಿನಾಂಕಕ್ಕೆ ಪಾವತಿಸಲು ಸ್ಟ್ಯಾಂಡಿಂಗ್ ಇನ್ಸ್ ಟ್ರಕ್ಷನ್ ಸೆಟ್ ಮಾಡಿದರೆ, ನಿಮ್ಮ ಬಿಲ್ ನೀವು ನಿಗದಿಪಡಿಸಿದ ದಿನಾಂಕದಂದೇ ಅಟೋಮ್ಯಾಟಿಕ್ ಆಗಿ ಪಾವತಿಯಾಗಲಿದೆ. ಇದುವರೆಗೆ ಈ ಸೇವೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಪ್ರಿಪೇಯ್ಡ್ ಬಿಲ್ ಪಾವತಿ ಹಾಗೂ ವ್ಯಾಲೆಟ್ ಪೇಮೆಂಟ್ ಸೇವೆಗಳಿಗೆ ಮಾತ್ರ ಸೀಮಿತವಾಗಿತ್ತು.


COMMERCIAL BREAK
SCROLL TO CONTINUE READING

ಈ ಕುರಿತು ಅಧಿಸೂಚನೆ ಜಾರಿಗೊಳಿಸಿರುವ RBI, ಒಂದು ವೇಳೆ ಯಾವುದೇ ರೀತಿಯ ಬಿಲ್ ಪಾವತಿಸಲು ಒಂದು ವೇಳೆ ಗ್ರಾಹಕರು ಸ್ಟ್ಯಾಂಡಿಂಗ್ ಸೂಚನೆ ಜಾರಿಗೊಳಿಸಿದರೆ, ನಿಗದಿತ ದಿನಾಂಕದಂದು ಬಿಲ್ ತನ್ನಷ್ಟಕ್ಕೆ ತಾನೇ ಪಾವತಿಯಾಗಲಿದೆ ಎಂದಿದೆ. UPI ಮೂಲಕ ರೆಕರಿಂಗ್ ಬಿಲ್ ಪಾವತಿಯನ್ನು ಸುರಕ್ಷಿತಗೊಳಿಸಲು ಇ-ಮ್ಯಾಂಡೆಟ್ ಗೆ ಮಂಜೂರಾತಿ ನೀಡಬೇಕು.


ಈ ಸೇವೆಯನ್ನು ಬಳಸಿ ಗ್ರಾಹಕರು ರೂ.2000 ವರೆಗಿನ ಯಾವುದೇ ಬಿಲ್ ಅನ್ನು ಪಾವತಿಸಬಹುದಾಗಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಯಾವ ಸಂದರ್ಭದಲ್ಲಿ ಬೇಕಾದರೂ ಗ್ರಾಹಕರು ತಮ್ಮ ಸ್ಟ್ಯಾಂಡಿಂಗ್ ಸೂಚನೆಗಳನ್ನು ರದ್ದುಗೊಳಿಸಬಹುದು.


ಇದರ ಜೊತೆಗೆ ಈ ಸೇವೆಯ ಷರತ್ತುಗಳನ್ನು ಉಲ್ಲಂಘಿಸುವ ಪೇಮೆಂಟ್ ಆಪರೇಟರ್ಸ್ ಗಳ ಮೇಲೆ ವಿಧಿಸಲಾಗುವ ದಂಡದ ನಿಯಮಗಳಲ್ಲಿಯೂ ಕೂಡ ಬ್ಯಾಂಕ್ ಬದಲಾವಣೆ ಮಾಡಿದೆ. ಬಳಕೆದಾರರು ಸೇರಿದಂತೆ ಈ ಸೇವಯಡಿ ಬರುವ ಎಲ್ಲಾ ವರ್ಗಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿಕೊಂಡಿದೆ. ವಿಭಿನ್ನ ವರ್ಗಗಳ ಮೇಲೆ ಬೀಳುವ ಪರಿಣಾಮವನ್ನು ಆಧರಿಸಿ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ದಂಡದ ಹಣವನ್ನು ನಿರ್ಧರಿಸಲಾಗುವುದು ಎಂದಿದೆ.


ಒಂದು ವೇಳೆ ಈ ಮೂಲಕ ನಡೆಸಲಾಗುವ ವ್ಯವಹಾರಗಳಲ್ಲಿ ಒಂದು ವೇಳೆ ನಿಯಮಗಳು ಉಲ್ಲಂಘನೆಯಾಗಿವೆ ಎಂದು ಗಮನಕ್ಕೆ ಬಂದರೆ, ಮೂಲ ರಾಶಿಯ ಎರಡು ಪಟ್ಟು ಅಥವಾ ಅತಿ ಹೆಚ್ಚು ಎಂದರೆ 5 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು RBI ಸ್ಪಷ್ಟಪಡಿಸಿದೆ. ಯಾವುದೇ ಒಂದು ಪ್ರಕರಣದಲ್ಲಿ ವಹಿವಾಟಿನ ರಾಶಿಯ ಲೆಕ್ಕಾಚಾರ ಸಂಭವವಿಲ್ಲ ಎಂದಾದಲ್ಲಿ ಗರಿಷ್ಟ 5 ಲಕ್ಷ ರೂ.ಗಳವರೆಗೆ ದಂಡವಿಧಿಸಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.