ನವದೆಹಲಿ: ಮುಂಬರುವ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ರೆಪೋ ದರವನ್ನು ಇಳಿಕೆ ಮಾಡುವ ಸಂಭವವಿದೆ ಎನ್ನಲಾಗಿದೆ. ಆರ್‌ಬಿಐ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸುವ ಸಂಭವವಿದೆ.


COMMERCIAL BREAK
SCROLL TO CONTINUE READING

ಗೃಹ ಮತ್ತು ವಾಹನ ಸಾಲಗಳು ಆರ್‌ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆರ್‌ಬಿಐ ರೆಪೋ ದರ ಕಡಿಮೆಯಾದಲ್ಲಿ ಗೃಹ ಮತ್ತು ವಾಹನ ಸಾಲಗಳು ಸೇರಿದಂತೆ ಇತರೆ ಸಾಲಗಳ ಮೇಲಿನ ಬಡ್ಡಿದರ ಕೂಡಾ ಇಳಿಕೆಯಾಗುತ್ತದೆ. ಇದರಿಂದ ಇಎಂಐ ಕೂಡಾ ಕಡಿಮೆಯಾಗಲಿದೆ. 


ರೆಪೋ ದರ ಎಂದರೇನು?
ಆರ್​ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.