Reserve Bank of India Recruitment 2022: ನೀವು ಕೂಡ ಒಂದು ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಲು ಸಿದ್ಧರಿದ್ದರೆ, ಈ ಸುದ್ದಿ ನಿಮಗಾಗಿ. ಭಾರತೀಯ ರಿಸರ್ವ್ ಬ್ಯಾಂಕ್ ಸೇವಾ ಮಂಡಳಿಯು ಮ್ಯಾನೇಜರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು RBIನ ಅಧಿಕೃತ ವೆಬ್ ಸೈಟ್ ಆಗಿರುವ  rbi.org.in ಗೆ ಭೇಟಿ ನೀಡುವ  ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 4, 2022 ಕೊನೆಯ ದಿನಾಂಕವಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಇನ್ಮುಂದೆ Train Guardಗಳು Train Manager ಎಂದು ಕರೆಯಿಸಿಕೊಳ್ಳಲಿದ್ದಾರೆ, ಕಾರಣ ಇಲ್ಲಿದೆ


ಈ ಅಭಿಯಾನದ ಅಡಿಯಲ್ಲಿ ಆರ್‌ಬಿಐ ಲಾ ಆಫೀಸರ್ ಗ್ರೇಡ್ ಬಿ, ಮ್ಯಾನೇಜರ್ (ತಾಂತ್ರಿಕ-ಸಿವಿಲ್), ಮ್ಯಾನೇಜರ್ (ತಾಂತ್ರಿಕ-ಎಲೆಕ್ಟ್ರಿಕಲ್), ಲೈಬ್ರರಿ ಪ್ರೊಫೆಷನಲ್ (ಅಸಿಸ್ಟೆಂಟ್ ಲೈಬ್ರರಿಯನ್) ಗ್ರೇಡ್ ಎ, ಆರ್ಕಿಟೆಕ್ಟ್ ಗ್ರೇಡ್ ಎ, ಫುಲ್ ಟೈಮ್ ಕ್ಯುರೇಟರ್ ಸೇರಿದಂತೆ ಒಟ್ಟು 14 ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸುತ್ತಿದೆ. ಇದಕ್ಕಾಗಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 15 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗಿದೆ. ಅಭ್ಯರ್ಥಿಗಳು 4 ಫೆಬ್ರವರಿ 2022 ರವರೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್/ಲಿಖಿತ ಪರೀಕ್ಷೆಯು 6ನೇ ಮಾರ್ಚ್ 2022 ರಂದು ನಡೆಯಲಿದೆ.


ಇದನ್ನೂ ಓದಿ-ಈಗ ನೀವು ತುರ್ತು ಪರಿಸ್ಥಿತಿಯಲ್ಲಿ ಎರಡು ಬಾರಿ ನಿಮ್ಮ EPF ಖಾತೆಯಿಂದ ಹಣ ಪಡೆಯಬಹುದು


ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಮತ್ತು ಈ ಪೋಸ್ಟ್‌ಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ವಿಸ್ತೃತ ಮಾಹಿತಿ ಪಡೆಯಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸಾಮಾನ್ಯ / OBC / EWS ವರ್ಗದವರ ಅರ್ಜಿ ಶುಲ್ಕವನ್ನು 600 ರೂ. ಗೆ ನಿಗದಿಪಡಿಸಲಾಗಿದೆ. ಇದೇ ವೇಳೆ, SC / ST / PWBD ವರ್ಗಕ್ಕೆ ರೂ 100 ಶುಲ್ಕವನ್ನು ನಿಗದಿಪಡಿಸಲಾಗಿದೆ. ಬ್ಯಾಂಕ್ ಪ್ರತ್ಯೇಕವಾಗಿ ನಿಗದಿಪಡಿಸಿದಂತೆ ಅರ್ಹತಾ ಮಾನದಂಡಗಳನ್ನು ಪೂರೈಸುವ RBI ಉದ್ಯೋಗಿಗಳಿಗೆ (ಸಿಬ್ಬಂದಿ ಅಭ್ಯರ್ಥಿಗಳಿಗೆ) ಮಾತ್ರ ಶುಲ್ಕ ವಿನಾಯಿತಿ ನೀಡಲಾಗುವುದು. ಒಮ್ಮೆ ಪಾವತಿಸಿದ ಶುಲ್ಕ/ಇಂಟಿಮೇಶನ್ ಶುಲ್ಕಗಳು ಯಾವುದೇ ಖಾತೆಯಲ್ಲಿ ಮರುಪಾವತಿಯಾಗುವುದಿಲ್ಲ.


ಇದನ್ನೂ ಓದಿ-Corona Side Effects: ಕೊರೊನಾದ ಈ ಅಡ್ಡಪರಿಣಾಮ ನಿಮ್ಮನ್ನು ತಲೆ ತಗ್ಗಿಸುವಂತೆ ಮಾಡಬಹುದು! ಶರೀರದ ಮೇಲೆ ಈ ಪ್ರಭಾವ ಉಂಟಾಗುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.