ನವದೆಹಲಿ: ಚಿನ್ನದ ಆಮದನ್ನು ಕಡಿಮೆ ಮಾಡುವ ಉದ್ದೇಶದಿಂದ ಇತ್ತೀಚಿಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ಚಿನ್ನದ ಆಮದು ಸುಂಕವನ್ನು ಶೇ 10 ರಿಂದ 12.5 ಕ್ಕೆ ಏರಿಸಿಸಲಾಗಿದೆ. ಹೀಗಾಗಿ ಚಿನ್ನದ ಬೆಲೆಯೂ ಹೆಚ್ಚಾಗಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ನಿಮಗೆ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಗೆ ಅವಕಾಶ ಒದಗಿಸಿದೆ! 


COMMERCIAL BREAK
SCROLL TO CONTINUE READING

ಹೌದು, ಸಾವರಿನ್ ಗೋಲ್ಡ್ ಬಾಂಡ್(SGB) ಬಿಡುಗಡೆ ಮಾಡಿರುವ ಮೋದಿ ಸರ್ಕಾರ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಚಿನ್ನ ಖರೀದಿಗೆ ಅವಕಾಶ ಕಲ್ಪಿಸಿದ್ದು, ಚಿನ್ನದ ಮೇಲೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ. ಈ ಯೋಜನೆಯ ಲಾಭ ಪಡೆಯಲು ಜುಲೈ 12 ಕಡೆಯ ದಿನವಾಗಿದೆ.


ಆದರೆ ಈ ಯೋಚನೆಯಡಿ ಚಿನ್ನ ಖರೀದಿ ಮಾಡುವವರಿಗೆ ಚಿನ್ನಕ್ಕೆ ಬದಲಾಗಿ ರಿಸರ್ವ್ ಬ್ಯಾಂಕ್ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. ಹೂಡಿಕೆ ಬಗ್ಗೆ ಆಲೋಚಿಸುತ್ತಿರುವವರಿಗೆ ಇದು ನಿಜಕ್ಕೂ ಉತ್ತಮ ಆಯ್ಕೆ. ಇದರಲ್ಲಿ ಒಂದು ಗ್ರಾಂ ಚಿನ್ನಕ್ಕೆ 3443 ರೂ. ಇದ್ದು, ಆನ್‌ಲೈನ್‌ ಮೂಲಕ ಪಾವತಿ ಮಾಡುವವರಿಗೆ 50 ರೂಪಾಯಿಯಷ್ಟು ಕಡಿಮೆಯಾಗಲಿದ್ದು, ಒಂದು ಗ್ರಾಂ ಚಿನ್ನದ ಬೆಲೆ ಕೇವಲ 3393 ರೂ.ಗಳಿಗೆ ಸಿಗಲಿದೆ. 


ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 3360 ರೂ. ಮತ್ತು 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 3528 ರೂ. ನಿಗದಿಯಾಗಿದೆ. 


ಹೂಡಿಕೆಯ ನಿಯಮಗಳು ಯಾವುವು?
ಈ ಯೋಜನೆಯಡಿ ಒಬ್ಬ ವ್ಯಕ್ತಿ ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ 4 ಕೆ.ಜಿ. ಚಿನ್ನ ಖರೀದಿಸಬಹುದು. ಪ್ರತಿ ವರ್ಷ, ಈ ಹೂಡಿಕೆಗೆ ಶೇ.2.5 ರಷ್ಟು ಬಡ್ಡಿ ದೊರೆಯಲಿದ್ದು, ಈ ಹೂಡಿಕೆಯನ್ನು ದೀರ್ಘಾವಧಿಗೆ ಮಾಡಿದ ಸಂದರ್ಭದಲ್ಲಿ ಲಾಭ ತೆರಿಗೆ ಮುಕ್ತವಾಗಿರುತ್ತದೆ.


1. ಸಾವರಿನ್ ಗೋಲ್ಡ್ ಬಾಂಡ್ ಕನಿಷ್ಠ ಅವಧಿ 8 ವರ್ಷಗಳು.
2. ಆದಾಗ್ಯೂ, ಐದು ವರ್ಷಗಳ ನಂತರ ಅದನ್ನು ಮಾರಾಟ ಮಾಡಬಹುದು.
3. ನೀವು ಈ ಬಾಂಡ್ ಅನ್ನು ಮಾರಾಟ ಮಾಡಲು ಬಯಸಿದಲ್ಲಿ(ಕನಿಷ್ಠ ಐದು ವರ್ಷಗಳ ನಂತರ), ಆ ದಿನಾಂಕದ ಕೇವಲ ಮೂರು ದಿನಗಳ ಮೊದಲು, ಸರಳ ಸರಾಸರಿ ಬೆಲೆಗೆ ಅನುಗುಣವಾಗಿ ಬಾಂಡ್ ಅನ್ನು ರಿಡೀಮ್ ಮಾಡಿಕೊಳ್ಳಬಹುದು.