ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್, NBFC ಹಾಗೂ HOUSING FINANCE ಕಂಪನಿಗಳಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ರಚಿಸುವ ಮೂಲಕ ವಿಶೇಷ ದ್ರವ್ಯತೆಯ ಯೋಜನೆಯನ್ನು ಪ್ರಕಟಿಸಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ದೀರ್ಘಕಾಳಧಿಂದ ದ್ರವ್ಯತೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಇದನ್ನು ಮನಗಂಡ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸುಮಾರು 30 ಸಾವಿರ ಕೋಟಿ ರೂ.ಗಳ ವಿಶೇಷ ದ್ರವ್ಯತೆ ಯೋಜನೆಯನ್ನು ಘೋಷಿಸಿತ್ತು.


COMMERCIAL BREAK
SCROLL TO CONTINUE READING

ಇದೀಗ ಇದಕ್ಕಾಗಿ ಎಸ್‌ಬಿಐನ ಅಂಗಸಂಸ್ಥೆಯಾದ ಎಸ್‌ಬಿಐ ಕ್ಯಾಪ್, ಎಸ್‌ಎಲ್‌ವಿ ಟ್ರಸ್ಟ್ ಹೆಸರಿನಲ್ಲಿ ಎಸ್‌ಪಿವಿ ರಚಿಸಿದೆ. ಈ ಮೂಲಕ ಎನ್‌ಬಿಎಫ್‌ಸಿ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳನ್ನು ದ್ರವ್ಯತೆ ಯೋಜನೆಗೆ ಸೇರಿಸಲಾಗುವುದು. ಆದರೆ ಈ ಯೋಜನೆಯೊಂದಿಗೆ ಲಿಂಕ್ ಆಗಲು ಕೆಲವು ಷರತ್ತುಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯ ಲಾಭವನ್ನು ಆಯ್ದ ಕಂಪನಿಗಳಿಗೆ ಮಾತ್ರ ನೀಡಲಾಗುವುದು.


ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭ
-ಎಲ್ಲಾ ಎನ್‌ಬಿಎಫ್‌ಸಿ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ ಲಾಭವಾಗಲಿದೆ. CIC ಹೊಂದಿರುವ ಎನ್‌ಬಿಎಫ್‌ಸಿಯನ್ನು ಇದರಿಂದ ಹೊರಗಿಡಲಾಗಿದೆ.
- ಇದಕ್ಕಾಗಿ 31 ಮಾರ್ಚ್ 2019ರವರೆಗೆ CRAR ಶೇ.15 ಕ್ಕಿಂತ ಕಡಿಮೆಯಿರಬಾರದು.
- ನಿವ್ವಳ ಎನ್‌ಪಿಎ 31 ಮಾರ್ಚ್ 2019 ರ ವೇಳೆಗೆ ಶೇ.6 ಕ್ಕಿಂತ ಹೆಚ್ಚಿರಬಾರದು.
- 2017-18 ಮತ್ತು 2018-19 ಈ ಎರಡು ವರ್ಷಗಳಲ್ಲಿ ಯಾವುದೇ ಒಂದು ವರ್ಷದಲ್ಲಿ ಕಂಪನಿಯು ಲಾಭ ಗಳಿಸಿರಬೇಕು.
- ಆಗಸ್ಟ್ 1, 2018 ರ ಮೊದಲು ಎಸ್‌ಎಂಎ 1 ಅಥವಾ ಎಸ್‌ಎಂಎ 2 ಕ್ಯಾಟೆಗರಿ ಪ್ರವೇಶಿಸಬಾರದು.
- SEBI ನೋಂದಾಯಿತ ರೇಟಿಂಗ್ ಏಜೆನ್ಸಿಯಿಂದ ಇನ್ವೆಸ್ಟ್ಮೆಂಟ್ ಗ್ರೇಡ್ ರೇಟಿಂಗ್ ಹೊಂದಿರಬೇಕು..
- ಎಸ್‌ಪಿವಿಯ ಕೋ-ಲ್ಯಾಟರಲ್ ಷರತ್ತುಗಳು ಏನೇ ಇದ್ದರೂ ಕೂಡ ಅದನ್ನು ಒಪ್ಪಿಕೊಳ್ಳಬೇಕು.


ಷರತ್ತುಗಳೇನು? ಹಾಗೂ ಈ ಯೋಜನೆ ಹೇಗೆ ಕಾರ್ಯನಿರ್ವಹಿಸಲಿದೆ
- ಎನ್‌ಬಿಎಫ್‌ಸಿ / ಎಚ್‌ಎಫ್‌ಸಿಗಳಿಂದ ಎಸ್‌ಪಿವಿ ಕಮರ್ಷಿಯಲ್ ಪೇಪರ್ ಗಳನ್ನು ಎನ್‌ಸಿಡಿ ಖರೀದಿಸಲಿದೆ.
ವಾಣಿಜ್ಯ ಕಾಗದ, ಎನ್‌ಸಿಡಿಯ ಮ್ಯಾಚೂರಿಟಿ ಅವಧಿ 3 ತಿಂಗಳಿಗಿಂತ ಹೆಚ್ಚಿರಬಾರದು.
- 2020 ರ ಸೆಪ್ಟೆಂಬರ್ 30 ರ ನಂತರ ನೀಡಲಾದ ವಾಣಿಜ್ಯ ಕಾಗದ, ಎನ್‌ಸಿಡಿಗೆ ಮಾನ್ಯತೆ ಇರುವುದಿಲ್ಲ.
- ಎಸ್‌ಪಿವಿ 30 ಸೆಪ್ಟೆಂಬರ್ 2020 ರ ನಂತರ ಯಾವುದೇ ಹೊಸ ಸಿಪಿ, ಎನ್‌ಸಿಡಿ ಖರೀದಿಸುವುದಿಲ್ಲ.
- ಎಸ್‌ಪಿವಿ, ಎಲ್ಲಾ ವಾಣಿಜ್ಯ ಪತ್ರಗಳನ್ನು, NCDಗಳ ರಿಕವರಿ ಡಿಸೆಂಬರ್ ವರೆಗೆ ಪೂರ್ಣಗೊಳಿಸಲಿದೆ.


ಸರ್ಕಾರದ ಕೈಗೊಂಡ ನಿರ್ಣಯದ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆಯಾದ ಎಸ್‌ಬಿಐ ಕ್ಯಾಪ್ ಇದರ ನಿರ್ವಹಣೆಗಾಗಿ ಎಸ್‌ಪಿವಿ (ಎಸ್‌ಎಲ್‌ಎಸ್ ಟ್ರಸ್ಟ್) ಅನ್ನು ರಚಿಸಲಿದೆ. ಯೋಜನೆಯಡಿಯಲ್ಲಿ ಎಸ್‌ಪಿವಿ,  ಎನ್‌ಬಿಎಫ್‌ಸಿ / ಎಚ್‌ಎಫ್‌ಸಿಯಿಂದ ಅಲ್ಪಾವಧಿಯ ಪತ್ರಿಕೆಗಳನ್ನು ಮಾತ್ರ ಖರೀದಿಸಲಿದೆ ಹಾಗೂ ಅದರ ಉಪಯೋಗವನ್ನು ಚಾಲ್ತಿಯಲ್ಲಿರುವ ಲೇವಾದೇವಿಗಾಗಿ ಬಳಸಲಾಗುವುದು. ಈ ಪರಿಕ್ಕರಗಳಲ್ಲಿ ಸಿಪಿ ಮತ್ತು ಎನ್‌ಸಿಡಿಗಳೂ ಕೂಡ  ಒಳಗೊಂಡಿರುತ್ತವೆ. ಇವು ಮೂರು ತಿಂಗಳಿಗಿಂತ ಹೆಚ್ಚಿನ ಮ್ಯಾಚ್ಯೂರಿಟಿ ಅವಧಿಯನ್ನು ಹೊಂದಿರಬಾರದು ಮತ್ತು ಇನ್ವೆಸ್ಟ್ಮೆಂಟ್ ಗ್ರೇಡ್ ರೇಟಿಂಗ್ ಹೊಂದಿರಬೇಕು.


45,000 ಕೋಟಿ ರೂ.ಗಳ ಭಾಗಶಃ ಸಾಲ ಖಾತರಿ ಲಭ್ಯವಿರುತ್ತದೆ
ಸರ್ಕಾರದ ವತಿಯಿಂದ ಎನ್‌ಬಿಎಫ್‌ಸಿಗಳಿಗೆ 45,000 ಕೋಟಿ ರೂ.ಗಳ ಭಾಗಶಃ ಸಾಲ ಖಾತರಿ ನೀಡಲಾಗುತ್ತಿದೆ. ಇದು ಎಎ ಪೇಪರ್ಸ್ ಹಾಗೂ ಅದಕ್ಕಿಂತ ಕಡಿಮೆ ದರ್ಜೆಯ ರೇಟ್ ಹೊಂದಿರುವ ಪೇಪರ್ಸ್ ಗಳಿಗೆ ಸಾಲ ಸಿಗಲಿದೆ. ಇಲ್ಲಿ ವಿಶೇಷ ಎಂದರೆ ರೇಟ್ ಗಳನ್ನು ಹೊಂದಿರದ ಪೇಪರ್‌ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹೊಸ ಸಾಲಕ್ಕೆ ಉತ್ತೇಜನ ಸಿಗಲಿದೆ.