ನವದೆಹಲಿ : ಆಡಳಿತದಿಂದ ಅನುಮತಿ ನೀಡದಿದ್ದರೂ ಪಂಜಾಬ್ ಮತ್ತು ಛತ್ತೀಸ್‌ಗಢದ (Chhattisgarh) ಮುಖ್ಯಮಂತ್ರಿಗಳೊಂದಿಗೆ ಲಕ್ನೋ ಮತ್ತು ಲಖಿಂಪುರ್ ಖೇರಿಗೆ (Lakhimpur Kheri) ಭೇಟಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gndhi)  ಹೇಳಿದ್ದಾರೆ. ಲಕ್ನೋಗೆ ತೆರಳುವ ಮುನ್ನ ಮಾತನಾಡಿದ ಅವರು,   ಮೂರು ಜನರ ತೆರಳಿದರೆ ಸೆಕ್ಷನ್ 144 ಅನ್ವಯಿಸುವುದಿಲ್ಲ. ಕೇವಲ ಮೂವರು ವ್ಯಕ್ತಿಗಳು ಮಾತ್ರ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಲಖಿಂಪುರಕ್ಕೆ ಹೋಗಲು ಕಾಂಗ್ರೆಸ್‌ಗೆ ಏಕೆ ಅವಕಾಶ ನೀಡಲಿಲ್ಲ? 
ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Charanjit Singh Channi) ಕೂಡಾ ತಮ್ಮೊಂದಿಗೆ  ಲಕ್ನೋಗೆ ತೆರಳುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲಿಂದ ಲಖಿಂಪುರ್ ಖೇರಿಗೆ ಹೋಗುವುದಾಗಿ ರಾಹುಲ್ ಗಾಂಧಿ (Rahul Gandhi) ತಿಳಿಸಿದ್ದಾರೆ. "ಇತರ ರಾಜಕೀಯ ಪಕ್ಷಗಳು ಲಖಿಂಪುರ್ ಖೇರಿಗೆ ಹೋಗಲು ಅನುಮತಿ ಸಿಗುತ್ತದೆ, ಆದರೆ ಕಾಂಗ್ರೆಸ್ ನಿಯೋಗಕ್ಕೆ ಮಾತ್ರ ನಿರಾಕರಣೆ ಯಾಕೆ ಎಂದು ಪ್ರಶ್ನಿಸಿದ್ದಾರೆ. 


ಇದನ್ನೂ ಓದಿ : Big Scheme! Covid-19 ಕಾಲದಲ್ಲಿ ಸ್ಥಗಿತಗೊಂಡ ವ್ಯಾಪಾರ ಪುನರಾರಂಭಿಸಲು ಫಟ್ ಅಂತ ಸಿಗಲಿದೆ 10 ಕೋಟಿ ರೂ.


"ಘರ್ಷಣೆಗೆ ಹೆದರುವುದಿಲ್ಲ" :
"ಜನರ ಸಮಸ್ಯೆಗಳಿಗೆ ದನಿಯಾಗುವ ಬಗ್ಗೆ ನಮಗೆ ತರಬೇತಿ ನೀಡಲಾಗಿದೆ. ಹೀಗಿರುವಾಗ ಘರ್ಷಣೆಗೆ ನಾವು ಹೆದರುವುದಿಲ್ಲ, ಅಥವ ಹಿಂದೆ ಸರಿಯುವುದೂ ಇಲ್ಲ ಎಂದು ಹೇಳಿದ್ದಾರೆ. ಸರ್ಕಾರದಿಂದ ರೈತರ (Farmers) ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 


ಸೆಕ್ಷನ್ 144 ಜಾರಿ : 
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ಲಖಿಂಪುರ್ ಖೇರಿಗೆ (Lakhimpur Kheri) ಭೇಟಿ ನೀಡಲು  ಉತ್ತರ ಪ್ರದೇಶ ಸರ್ಕಾರವು ಅನುಮತಿ ನಿರಾಕರಿಸಿತ್ತು. ಭಾನುವಾರದ ಹಿಂಸಾಚಾರದ ನಂತರ ಸ್ಥಳದಲ್ಲಿ 144 ಸೆಕ್ಷನ್ ವಿಧಿಸಲಾಗಿದೆ. 


ಇದನ್ನೂ ಓದಿ :  ಹಳೆಯ ಪಠ್ಯಕ್ರಮದಂತೆಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ


ಈ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ,  ರಾಹುಲ್ ನೇತೃತ್ವದ ನಿಯೋಗಕ್ಕೆ ಅನುಮತಿ ನೀಡುವಂತೆ ಕೋರಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Aadityanaath)  ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದ ಐದು ಸದಸ್ಯರ ನಿಯೋಗ ಜಿಲ್ಲೆಗೆ ಭೇಟಿ ನೀಡಲು ಯೋಜಿಸಿರುವ ಬಗ್ಗೆ ತಿಳಿಸಿದ್ದರು. 


 ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಲಿರುವ ರಾಹುಲ್ :
ಸೋಮವಾರದಿಂದ ಸೀತಾಪುರದ ಪಿಎಸಿ ಅತಿಥಿ ಗೃಹದಲ್ಲಿ ಇರಿಸಲಾಗಿರುವ ಸಹೋದರಿ ಪ್ರಿಯಾಂಕಾ ಅವರನ್ನು ಕೂಡ ರಾಹುಲ್ ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಂಗಳವಾರ ಸಂಜೆ ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿದ್ದು, ಅತಿಥಿ ಗೃಹವನ್ನು ತಾತ್ಕಾಲಿಕ ಜೈಲನ್ನಾಗಿ ಮಾಡಿ, ಅಲ್ಲಿ ಇರಿಸಲಾಗಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.