ಗುವಾಹಟಿ: ಬಿಜೆಪಿಯ ಬೂತ್ ಯುನಿಟ್ ಮುಖ್ಯಸ್ಥರ ಸಭೆಯೊಂದರಲ್ಲಿ ಭಾಷಣದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು, ಸಂಸತ್ತಿನಲ್ಲಿ ಮೋದಿ ಸರ್ಕಾರಕ್ಕೆ ಯಾವುದೇ ಅವಿಶ್ವಾಸ ನಿರ್ಣಯದ ಭಯವಿಲ್ಲ. 'ಬಿಜೆಪಿ ಸರ್ಕಾರವು ಅವಿಶ್ವಾಸ ನಿರ್ಣಯಕ್ಕೆ ಮುಖಾಮುಖಿಯಾಗಲು ಸಿದ್ಧವಾಗಿದೆ, ನಮಗೆ ಪೂರ್ಣ ಬಹುಮತವಿದೆ' ಎಂದು ಶಾ ವಿಶ್ವಾಸದ ನುಡಿಗಳನ್ನಾಡಿದರು.


COMMERCIAL BREAK
SCROLL TO CONTINUE READING

ಸಂಸತ್ ಕಲಾಪ ನಡೆಸಲು ವಿರೋಧ ಪಕ್ಷ ಬಯಸುವುದಿಲ್ಲ
ನಾವು ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ಧರಿದ್ದೇವೆ, ಆದರೆ ಸಂಸತ್ ಕಲಾಪ ನಡೆಸಲು ವಿರೋಧ ಪಕ್ಷವು ಬಯಸುವುದಿಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ. ಅದೇ ಸಮಯದಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ 25 ಸಂಸತ್ ಕ್ಷೇತ್ರಗಳಲ್ಲಿ 21 ಸ್ಥಾನಗಳನ್ನು ಗೆಲ್ಲುವ ಮೂಲಕ ಅವರು ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಸನ್ನದ್ಧರಾಗಿದ್ದಾರೆ ಎಂದು ಶಾ ತಿಳಿಸಿದರು. ಈ ಗುರಿ ಪೂರೈಸುವ ಕಡೆಗೆ ಕೆಲಸ ಮಾಡಲು ಪಕ್ಷದ ಕಾರ್ಯಕರ್ತರಿಗೆ ಶಾ ಕರೆ ನೀಡಿದರು.




ಈಶಾನ್ಯದಲ್ಲಿ 25 ಸ್ಥಾನಗಳಲ್ಲಿ 21 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಗುರಿ
2019 ರ ಚುನಾವಣೆಯಲ್ಲಿ ಈಶಾನ್ಯದಲ್ಲಿ 25 ಸ್ಥಾನಗಳಲ್ಲಿ 21 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವುದಾಗಿ ತಿಳಿಸಿದ ಶಾ, ಅದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. 2014 ರ ಲೋಕಸಭೆ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಲ್ಲಿ 8 ಸ್ಥಾನಗಳನ್ನು ಗೆದ್ದಿದ್ದಾರೆ.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬಲಪಡಿಸುವ ಸಲುವಾಗಿ, ಈಶಾನ್ಯದಿಂದ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಮತ್ತು ಆ ಪ್ರದೇಶದಲ್ಲಿ ಅಭಿವೃದ್ಧಿಯ ಚಟುವಟಿಕೆಗಳು ಮುಂದುವರೆಯಬೇಕು ಎಂದು ಶಾ ತಿಳಿಸಿದರು.