ನವದೆಹಲಿ: ನಿನ್ನೆಯಷ್ಟೇ ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ಅವರದೇ ಹಾದಿಯಲ್ಲಿ ಗುಜರಾತ್ ಸರಕಾರ ಮುನ್ನಡೆಯಿಟ್ಟಿದೆ


COMMERCIAL BREAK
SCROLL TO CONTINUE READING

ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ನೀತಿನ್ ಪಟೇಲ್  ಅಹ್ಮದಾಬಾದ್ ಹೆಸರನ್ನು ಬದಲಿಸಲು ಬಿಜೆಪಿ ಸರ್ಕಾರ ಸಿದ್ದವಾಗಿದೆ ಎಂದು ತಿಳಿಸಿದರು. 'ವರ್ಲ್ಡ್ ಹೆರಿಟೇಜ್' ಟ್ಯಾಗ್ ಹೊಂದಿರುವ ಭಾರತದ ಏಕೈಕ ನಗರವೆಂದು ಮರುನಾಮಕರಣ ಮಾಡುವ ಯೋಜನೆಯನ್ನು ಸರ್ಕಾವೇನಾದರು ಹೊಂದಿದೆಯೇ ಎಂದು ಸುದ್ದಿಗಾರರು ಕೇಳಿದಾಗ  ಇದಕ್ಕೆ ಉತ್ತರಿಸಿದ ಅವರು "ಅಹ್ಮದಾಬಾದ್ ಗೆ ಕರ್ನಾವತಿ ಎಂದು ಮರುನಾಮಕರಣ ಮಾಡಬೇಕೆಂದು ಜನರ ಆಶಯವೂ ಆಗಿದೆ ಆದರೆ ಇದಕ್ಕಿರುವ ಕಾನೂನು ತೊಡಕುಗಳಿಂದ ಹೊರಬರಲು ನಮಗೆ ಬೆಂಬಲ ಸಿಕ್ಕಿದ್ದಲ್ಲಿ ನಾವು ನಗರದ ಹೆಸರನ್ನು ಬದಲಾಯಿಸಲು ನಾವು ಸಿದ್ಧರಿದ್ದೇವೆ " ಎಂದು ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.


ಐತಿಹಾಸಿಕವಾಗಿ, ಅಹಮದಾಬಾದ್ ಸುತ್ತಲಿನ ಪ್ರದೇಶವು 11ನೇ ಶತಮಾನದಿಂದಲೂ ಅಶವಾಲ್ ಎಂದು ಕರೆಯಲ್ಪಡುತ್ತಿತ್ತು.ಅಹಿಲ್ವಾರ (ಆಧುನಿಕ ಪತಾನ್) ನ ಚೌಲುಕ್ಯ ಆಡಳಿತಗಾರ ಕರ್ಣ ಅಶವಾಲ್ನ ಭಿಲ್ ರಾಜನ ವಿರುದ್ಧ ಯಶಸ್ವಿ ಯುದ್ಧವನ್ನು ಸಾರಿ ಸಬರ್ಮತಿ ನದಿಯ ದಂಡೆಯಲ್ಲಿ ಕರ್ನಾವತಿ ಹೆಸರಿನಲ್ಲಿ ನಗರವನ್ನು ಸ್ಥಾಪಿಸಿದರು.ಕ್ರಿ.ಶ 1411 ನಲ್ಲಿ ಸುಲ್ತಾನ್ ಅಹ್ಮದ್ ಶಾ ಅವರು ಹೊಸ ನಗರವನ್ನು ಕರ್ನಾವತಿ ಬಳಿ ಸ್ಥಾಪಿಸಿದರು. ಆ ಪ್ರದೇಶದ ವ್ಯಾಪ್ತಿಯಲ್ಲಿ ನಾಲ್ವರು  ಅಹ್ಮದ್ ಎಂಬ ಹೆಸರಿನ ನಾಲ್ಕು ಸಂತರು ಇದ್ದಿದ್ದರಿಂದ ಅದನ್ನು ಅಹಮದಾಬಾದ್ ಎಂದು ಹೆಸರಿಸಿಲಾಯಿತು.