ಅಯೋಧ್ಯೆಯಲ್ಲಿ ನಗರ ಯಾತ್ರೆ ವೇಳೆ ಶ್ರೀರಾಮನ ಕಣ್ಣಿಗೆ ಪಟ್ಟಿ ಕಟ್ಟುವ ಹಿಂದಿನ ಕಾರಣ ಇದು!
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಜನವರಿ 17 ರಂದು ಜನರು ಈ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು.
ಅಯೋಧ್ಯೆ : ರಾಮ ಜನ್ಮ ಭೂಮಿಯಲ್ಲಿ ಹೊಸದಾಗಿ ನಿರ್ಮಿಸಲಾದ ಭವ್ಯವಾದ ದೇವಾಲಯದಲ್ಲಿ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಘಟನೆಗೆ ಇಡೀ ರಾಷ್ಟ್ರ ಸಾಕ್ಷಿಯಾಗುವ ದಿನ ಸನಿಹದಲ್ಲಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಜನವರಿ 22, 2024 ರಂದು ಪವಿತ್ರೀಕರಣವು ನಡೆಯಲಿದೆ. ಈ ಸಂಪೂರ್ಣ ಕಾರ್ಯಕ್ರಮವು ಸುಮಾರು ಒಂದು ವಾರದವರೆಗೆ ಇರುತ್ತದೆ.ಕಾರ್ಯಕ್ರಮ ಜನವರಿ 16, 2024 ರಿಂದಲೇ ಪ್ರಾರಂಭವಾಗುತ್ತದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀರಾಮನ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಜನವರಿ 17 ರಂದು ಜನರು ಈ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು.
'ಪ್ರಭು ರಾಮ'ನ ನಗರ ಪ್ರವಾಸ :
ಆಯ್ಕೆಯಾದ ವಿಗ್ರಹದ ಬಗ್ಗೆ ಟ್ರಸ್ಟ್ ಈಗ ಏನನ್ನೂ ಹೇಳುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಹೇಳಿದ್ದಾರೆ. ಮಹಾಮಸ್ತಕಾಭಿಷೇಕಕ್ಕೂ ಮುನ್ನ ಜನವರಿ 17ರಂದು ಪ್ರತಿಮೆ ಅನಾವರಣಗೊಳ್ಳಲಿದೆ. ಈ ದಿನ ರಾಮಭಕ್ತರು ರಾಮನ ವಿಗ್ರಹದ ದರ್ಶನ ಪಡೆಯಬಹುದು. ಇದಕ್ಕಾಗಿ ಅಯೋಧ್ಯೆಯಲ್ಲಿ ನಗರ ಯಾತ್ರೆ ಕೈಗೊಳ್ಳಲಾಗುವುದು. ಅದೇ ದಿನ, ಈ ಪ್ರತಿಮೆಯ ಫೋಟೋ ಮತ್ತು ವೀಡಿಯೊಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತದೆ. ಶ್ರೀರಾಮನ ವಿಗ್ರಹವು ನಗರ ಪ್ರದಕ್ಷಿಣೆಗೆ ಬಂದಾಗ, ಭಗವಂತನ ವಿಗ್ರಹದ ಕಣ್ಣುಗಳನ್ನು ಬಟ್ಟೆಯ ಮುಚ್ಚಲಾಗಿರುತ್ತದೆ.
ಇದನ್ನೂ ಓದಿ : Daily GK Quiz: ಮೊದಲಿಗೆ ಸಂಚಾರಿ ಹೈಕೋರ್ಟ್ ಸ್ಥಾಪಿಸಿದ ರಾಜ್ಯ ಯಾವುದು?
ಕಣ್ಣಿಗೆ ಬಟ್ಟೆ ಕಟ್ಟುವುದರ ಹಿಂದಿನ ಉದ್ದೇಶ :
ಕಣ್ಣುಗಳು ಶಕ್ತಿಯ ಮೂಲವಾಗಿದ್ದು ಅಲ್ಲಿಂದಲೇ ಭಾವನೆಗಳ ವಿನಿಮಯ ನಡೆಯುತ್ತದೆ. ಬ್ಯಾಂಕೇನ್ ಬಿಹಾರಿ ಅಂದರೆ ಕೃಷ್ಣನ ವಿಗ್ರಹವನ್ನು ಕೂಡಾ ಭಕ್ತರು ಹೆಚ್ಚು ಹೊತ್ತು ನೋಡಬಾರದು ಎನ್ನುವ ಕಾರಣಕ್ಕೆ ಕೃಷ್ಣ ಮಂದಿರದಲ್ಲಿನ ಗರ್ಭಗುಡಿಯ ಪರದೆಯನ್ನು ಪದೇ ಪದೇ ಮುಚ್ಚಲಾಗುತ್ತದೆಯಂತೆ. ಏಕೆಂದರೆ ಒಮ್ಮೆ ಒಬ್ಬ ಭಕ್ತನು ಭಗವಂತನ ಕಣ್ಣುಗಳನ್ನು ತುಂಬಾ ಶೃದ್ದಾ, ಭಕ್ತಿ, ಪ್ರೇಮದಿಂದ 30 ಸೆಕೆಂಡುಗಳ ಕಾಲ ನೋಡಿದನಂತೆ. ಆಗ ಶ್ರೀ ಕೃಷ್ಣನು ಭಕ್ತನ ಪ್ರಭಾವಕ್ಕೆ ಒಳಗಾಗಿ ಭಕ್ತನೊಂದಿಗೆ ಹೊರಟುಹೋದನಂತೆ.
ಅಂದರೆ ದೇವರ ವಿಗ್ರಹದಲ್ಲಿ ಕಣ್ಣುಗಳು ಪ್ರಮುಖವಾದವು.ಆದ್ದರಿಂದ,ಪವಿತ್ರೀಕರಣದ ನಂತರವೇ ಕಣ್ಣುಗಳ ಪಟ್ಟಿಯನ್ನು ತೆರೆಯಲಾಗುತ್ತದೆ. ದೇವರ ವಿಗ್ರಹದ ಕಣ್ಣುಗಳನ್ನು ನೋಡುವುದು ಶಕ್ತಿ, ಸಕಾರಾತ್ಮಕತೆ ಮತ್ತು ಆತ್ಮಾನಂದದ ಭಾವನೆಯನ್ನು ನೀಡುತ್ತದೆ. ಆದ್ದರಿಂದ, ನಗರ ಪ್ರವಾಸದ ಸಮಯದಲ್ಲಿ ವಿಗ್ರಹದ ಕಣ್ಣುಗಳಿಗೆ ಪಟ್ಟಿ ಕಟ್ಟಲಾಗಿರುತ್ತದೆ.
ಇದನ್ನೂ ಓದಿ : ತಾಯಿ ಸೋನಿಯಾ ಜೊತೆ ಸೇರಿ ಅಡುಗೆ ಮಾಡಿದ ರಾಹುಲ್ ಗಾಂಧಿ! ಏನ್ ಸ್ಪೆಷಲ್ ತಯಾರಿಸಿದ್ರು ಗೊತ್ತಾ?
ಈ ಮೂರ್ತಿ ಬಹಳ ವಿಶೇಷ :
ಶ್ರೀ ರಾಮನ ಈ ವಿಗ್ರಹ ಬಹಳ ವಿಶೇಷವಾಗಿದೆ. ನೇಪಾಳದ ನಾರಾಯಣಿ ನದಿಯಿಂದ ಶಾಲಿಗ್ರಾಮ ಬಂಡೆಯನ್ನು ತಂದು ಕೆತ್ತಿ ಈ ಪ್ರತಿಮೆಯನ್ನು ಮಾಡಲಾಗಿದೆ. ಶಾಲಿಗ್ರಾಮವು ವಿಷ್ಣುವಿನ ವಿಗ್ರಹ ರೂಪವಾಗಿದೆ. ಭಗವಾನ್ ರಾಮನು ವಿಷ್ಣುವಿನ ಅವತಾರ.
ಆಕರ್ಷಕ ಮತ್ತು ದೈವಿಕ :
ರಾಮ ಮಂದಿರಕ್ಕೆ ಆಯ್ಕೆಯಾದ ವಿಗ್ರಹ ನೋಡುತ್ತಿದ್ದರೆ ಮನದಲ್ಲಿ ದೈವತ್ವದ ಭಾವನೆ ಮೂಡುತ್ತದೆ.ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತನು ಸಕಾರಾತ್ಮಕತೆ ಮತ್ತು ಸಂತೋಷದ ಭಾವನೆಯನ್ನು ಪಡೆಯುತ್ತಾನೆ.ಈ ವಿಗ್ರಹದ ಮೂಲಕವೇ ತನ್ನ ಅಪಾರ ನಿಷ್ಠೆ, ಪ್ರೀತಿ ಮತ್ತು ಭಕ್ತಿಯನ್ನು ವ್ಯಕ್ತಪಡಿಸಬಹುದು ಎನ್ನುತ್ತಾರೆ ಪಂಡಿತ್ ದಿವಾಕರ್ ತ್ರಿಪಾಠಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ