ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ  ಏಕನಾಥ್ ಶಿಂಧೆ ನೇತೃತ್ವದ ಬಣ ಸದ್ಯ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದೆ. ಐಷಾರಾಮಿ ಹೊಟೇಲ್‌ನಲ್ಲಿ ಟೈಂಪಾಸ್‌ ಮಾಡುತ್ತಿರುವ ಫೋಟೋಗಳು ವೈರಲ್‌ ಆಗುತ್ತಿವೆ. ಈಗಾಗಲೇ ತನಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ಈ ಎಲ್ಲಾ ಬಂಡಾಯ ಶಾಸಕರು ಗುವಾಹಟಿಯ ಹೋಟೆಲ್ ರಾಡಿಸನ್ ಬ್ಲೂನಲ್ಲಿ ತಂಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆ : IMD ಎಚ್ಚರಿಕೆ


ವಾರಗಳೇ ಕಳೆದರೂ ಶಿಂಧೆ ಮತ್ತು ಶಿವಸೇನೆ ನಡುವಿನ ಕದನ ನಿಲ್ಲುತ್ತಿಲ್ಲ. ಸದ್ಯ ಈ ಬಿಕ್ಕಟ್ಟು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಗುವಾಹಟಿಯಲ್ಲಿ ತಂಗಿರುವ ಬಂಡಾಯ ಶಾಸಕರಿಗೂ ಈ ಬಾರಿ ಕಷ್ಟಸಾಧ್ಯವಾಗಿದ್ದು, ಕಳೆದ ಒಂದು ವಾರದಿಂದ ಹೋಟೆಲ್‌ನಲ್ಲಿ ಬಂಧಿಯಾಗಿದ್ದಾರೆ. ಬಿಗಿ ಭದ್ರತೆಯಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿದೆ. ಈ ಶಾಸಕರು ಹೋಟೆಲ್‌ನಲ್ಲಿ ಹೇಗೆ ಸಮಯ ಕಳೆಯುತ್ತಾರೆ ಮತ್ತು ದಿನವಿಡೀ ಏನು ಮಾಡುತ್ತಾರೆ ಎಂಬ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.


ಮಹಾರಾಷ್ಟ್ರದ ಬಂಡಾಯ ಶಾಸಕರು ಚೆಸ್ ಮತ್ತು ಲುಡೋ ಸೇರಿದಂತೆ ವಿವಿಧ ಒಳಾಂಗಣ ಆಟಗಳನ್ನು ಆಡುವ ಮೂಲಕ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ಸಭೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಗಂಭೀರ ಚಟುವಟಿಕೆಯನ್ನು ಹೊಂದಿಲ್ಲ ಎಂದು ಶಾಸಕರ ಆಪ್ತ ಮೂಲವು ಅನಾಮಧೇಯತೆಯ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. 


ಮಹಾರಾಷ್ಟ್ರದ ಅತೃಪ್ತ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ಹೊಟೇಲ್‌ನಿಂದ ಹೊರಗೆ ಬಿಡುವಂತಿಲ್ಲ. ಇನ್ನು ಅಸ್ಸಾಂನ ಬಿಜೆಪಿ ಶಾಸಕರು, ಮುಖಂಡರು ಮತ್ತು ಸಚಿವರು ಸಾಂದರ್ಭಿಕವಾಗಿ ಹೋಟೆಲ್‌ಗೆ ಭೇಟಿ ನೀಡಿ, ಅವರ ಜೊತೆ ಮಾತುಕತೆ ನಡೆಸಿಕೊಂಡು ಹೋಗುತ್ತಿದ್ದಾರೆ.


ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗುವಾಹಟಿ ಹೋಟೆಲ್‌ನಲ್ಲಿ ತಂಗಿದ್ದ ಒಂಬತ್ತು ಬಂಡಾಯ ಸಚಿವರ ಖಾತೆಗಳನ್ನು ಸೋಮವಾರ ಹಿಂತೆಗೆದುಕೊಂಡಿದ್ದಾರೆ. ಆದರೆ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‌ಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದು, ಕಳೆದ ದಿನ ವಾದ ಮಂಡನೆ ಮಾಡಿದ್ದಾರೆ. 


ಇದನ್ನೂ ಓದಿ: Vi ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ


ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಣ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಎದ್ದು ಒಂದು ವಾರವಾಗಿದೆ. 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಎರಡೂ ಕಡೆಯವರು ತಮ್ಮ ನಿಲುವಿನಲ್ಲಿ ದೃಢವಾಗಿದ್ದು ಸುದೀರ್ಘ ಹೋರಾಟಕ್ಕೆ ಸಿದ್ಧರಾಗಿರುವಂತೆ ತೋರುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.