ನವದೆಹಲಿ: ಶಿಕ್ಷಕರ ರಾಜಸ್ಥಾನ ಅರ್ಹತಾ ಪರೀಕ್ಷೆ (REET) -2021 ಭಾನುವಾರ ರಾಜಸ್ಥಾನದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ನಡೆಯಿತು.ರಾಜಸ್ಥಾನ (Rajasthan) ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದ ಪರೀಕ್ಷೆಯು 33 ಜಿಲ್ಲೆಗಳಲ್ಲಿ ಒಟ್ಟು 3,993 ಪರೀಕ್ಷಾ ಕೇಂದ್ರಗಳಲ್ಲಿ ಎರಡು ಪಾಳಿಯಲ್ಲಿ ನಡೆಯಿತು. ಪರೀಕ್ಷೆಗೆ 16.51 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದಾರೆ.


COMMERCIAL BREAK
SCROLL TO CONTINUE READING

ಭಾರೀ ಭದ್ರತೆ ಏರ್ಪಡಿಸಿದ್ದರೂ, ಕೆಲವು ಭಾಗಗಳಲ್ಲಿ ನಕಲು ಮಾಡಿರುವ ಘಟನೆಗಳು ವರದಿಯಾಗಿವೆ. ಬಿಕನೇರ್‌ನಲ್ಲಿ, ಪರೀಕ್ಷೆಯ ಸಮಯದಲ್ಲಿ ನಕಲು ಮಾಡಲು ಬ್ಲೂಟೂತ್ ಸಾಧನಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಚಪ್ಪಲಿಗಳನ್ನು ಧರಿಸಿದ್ದನ್ನು ಕಂಡು ಐದು ಜನರನ್ನು ಬಂಧಿಸಲಾಯಿತು.ಅಭ್ಯರ್ಥಿಗಳಿಗೆ ಚಪ್ಪಲಿಗಳನ್ನು 6 ಲಕ್ಷಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: 30 ಲಕ್ಷ ರೂ.ಗೆ ಪ್ರಶ್ನೆ ಪತ್ರಿಕೆ ಸೋರಿಕೆ: ಅಭ್ಯರ್ಥಿ, ಪರೀಕ್ಷಾ ಕೇಂದ್ರದ ಉಸ್ತುವಾರಿ ಸೇರಿ 8 ಮಂದಿ ಬಂಧನ


ಸುಮಾರು 25 ಜನರು ಈ ಚಪ್ಪಲಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ, ಮತ್ತು ಇದು ರಾಜ್ಯದಾದ್ಯಂತ ಲಭ್ಯವಿದೆ ಎಂದು ತಿಳಿದುಬಂದಿದೆ.ಪರೀಕ್ಷೆಗೆ ಮುನ್ನ ಗಂಗಾಶಹರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿದೆ.ತಪಾಸಣೆಯ ಸಮಯದಲ್ಲಿ ಚಪ್ಪಲಿ ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಯಿತು.


ಗ್ಯಾಂಗ್ ಲೀಡರ್ ಆಗಿರುವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಮತ್ತು ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ"ಎಂದು ಬಿಕಾನರ್ ಸೂಪರಿಂಟೆಂಡೆಂಟ್ ಪೊಲೀಸ್ ಪ್ರೀತಿ ಚಂದ್ರ ಪಿಟಿಐಗೆ ತಿಳಿಸಿದರು.


ಇದನ್ನೂ ಓದಿ: ರಾಜಸ್ತಾನದಲ್ಲಿ ನಾಗೌರ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ


'ಇಬ್ಬರು ವ್ಯಕ್ತಿಗಳನ್ನು ಮದನ್ ಲಾಲ್ ಮತ್ತು ತ್ರಿಲೋಕಚಂದ್ ಎಂದು ಗುರುತಿಸಲಾಗಿದೆ, ತಂಡದ ಸದಸ್ಯರು ಅಭ್ಯರ್ಥಿಗಳಿಗೆ ಅಥವಾ ಅವರ ಸಂಬಂಧಿಕರಿಗೆ ಚಪ್ಪಲಿಗಳನ್ನು ಒದಗಿಸಿದರು ಮತ್ತು ಮೂವರು ರೀಟ್ ಅಭ್ಯರ್ಥಿಗಳಾಗಿದ್ದರು ಎನ್ನಲಾಗಿದೆ.ರೀಟ್ ಪರೀಕ್ಷೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ಇತರ ಏಳು ಜನರನ್ನು ವಿವಿಧ  ಸ್ಥಳಗಳಿಂದ ಬಂಧಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.